ಬದಿಯಡ್ಕ: ಭಾರತೀಯ ಸಹೋದರ ಸಂಸ್ಕøತಿಯ ಪ್ರತೀಕವಾದ ರಕ್ಷಾಬಂಧನವು ಸಾಮಾಜಿಕ ಏಕತೆಯ ಸಂಕೇತವಾಗಿದೆ. ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ಮತ್ತೆ ಅವುಗಳಿಗೆ ಅರ್ಥ ಕಂಡುಕೊಳ್ಳುವಲ್ಲಿ ರಕ್ಷಾಬಂಧನದಂತಹ ಆಚರಣೆಗಳು ವ್ಯಾಪಕವಾಗಿ ನಡೆದು ನಿತ್ಯ ಜೀವನದಲ್ಲಿ ನೆನಪಲ್ಲಿರಬೇಕಾಗಿದೆ ಎಂದು ಪ್ರಗತಿಪರ ಕೃಷಿಕ, ಸಾಮಾಜಿಕ ಮುಂದಾಳು ಶ್ರೀಕೃಷ್ಣ ಭಟ್ ಪುದುಕೋಳಿ ಅವರು ಕರೆನೀಡಿದರು.
ಪುದುಕೋಳಿಯ ತತ್ವಮಸಿ ಬಾಲಗೋಕುಲದ ಆಶ್ರಯದಲ್ಲಿ ಗುರುವಾರ ಪುದುಕೋಳಿ ಅಂಗನವಾಡಿ ಪರಿಸರದಲ್ಲಿ ನಡೆದ ರಕ್ಷಾಬಂಧನ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಗೋಕುಲದ ಮಕ್ಕಳು ಈ ಸಂದರ್ಭ ದೀಪ ಸ್ತುತಿ ಹಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಏಣಿಯರ್ಪು ಶಾಖಾ ತಮಡದವರು ರಕ್ಷಾಬಂಧನ ನೆರವೇರಿಸಿದರು. ಹಿರಿಒಯರಾದ ಬಾಲಕೃಷ್ಣ ನಾಯಕ್ ಪುದುಕೋಳಿ, ರಜನೀ ಸಂದೀಪ್ ಪುದುಕೋಳಿ, ಬಾಲಗೋಕುಲ ಪ್ರಮುಖ್ ವಿಜಯ ಪುದುಕೋಳಿ, ಸಹಪ್ರಮುಖ್ ತಿಲಕ್ ರಾಜ್ ಪುದುಕೋಳಿ, ಶಿಕ್ಷಕಿಯರಾದ ಲಾವಣ್ಯ, ಹರ್ಷಿತ, ರವಿಕಿರಣ್, ಮುರಳೀಕೃಷ್ಣ, ಮತ್ತು ಸ್ಥಳೀಯ ತತ್ವಮಸಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಬಾಲಗೋಕುಲ ಶಿಕ್ಷಕಿ ಪಲ್ಲವಿ ಸ್ವಾಗತಿಸಿ, ಬಿಂದು ಸತೀಶ್ ವಂದಿಸಿದರು.


