ಬದಿಯಡ್ಕ: ಉಡುಪಿ ಕಟಪಾಡಿಯ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿಯವರ ಪಡುಕುತ್ಯಾರಲ್ಲಿ ನಡೆದ ಚಾತುರ್ಮಾಸದ ಸುಸಂದರ್ಭದಲ್ಲಿ ಯಕ್ಷಭಾರತಿ ನೀರ್ಚಾಲು ಅವರು ನಡೆಸಿಕೊಟ್ಟ `ವಾಲಿಮೋಕ್ಷ' ಎಂಬ ಪುಣ್ಯಕಥಾನಕದ ಯಕ್ಷಗಾನ ತಾಳಮದ್ದಳೆಯು ನೆರೆದ ಕಲಾಭಿಮಾನಿಗಳ ಮನರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕುಂಟಿಕಾನ, ಚೆಂಡೆವಾದಕರಾಗಿ ಈಶ್ವರ ಭಟ್ ಬಳ್ಳಮೂಲೆ, ಮದ್ದಳೆವಾದಕರಾಗಿ ಪಕಳಕುಂಜ ಶ್ಯಾಮ ಭಟ್, ವಾಮನ ಆಚಾರ್ಯ ಬೋವಿಕ್ಕಾನ ಸಹಕರಿಸಿದರು. ಅರ್ಥಧಾರಿಗಳಾಗಿ ಪಕಳಕುಂಜ ಶ್ಯಾಮ ಭಟ್, ಬಾಲಕೃಷ್ಣ ಆಚಾರ್ಯ ನೀರ್ಚಾಲು, ವಿಷ್ಣುಪ್ರಕಾಶ್ ಪೆರ್ವ, ವಾಮನ ಆಚಾರ್ಯ ಬೋವಿಕ್ಕಾನ ಹಾಗೂ ಅಡೂರು ವೆಂಕಟ್ರಮಣ ಆಚಾರ್ಯ ಭಾಗವಹಿಸಿದರು.


