HEALTH TIPS

ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ರೂಹಿ ರಫಿಕ್‍ಗೆ ಬ್ರದರ್ಸ್ ಮಣಿಮುಂಡ ವತಿಯಿಂದ ಸನ್ಮಾನ


     ಮಂಜೇಶ್ವರ : ಮಂಗಳೂರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾಲಯದಿಂದ ಉನ್ನತ ಅಂಕಗಳೊಂದಿಗೆ ಬಿಡಿಎಸ್ ಪೂರ್ತೀಕರಿಸಿದ ಸ್ಥಳೀಯ ನಿವಾಸಿಯಾದ ವೈದ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸಫರುಲ್ಲಾ ಎಸ್ ಆಹ್ಮದ್‍ರನ್ನು ಉಪ್ಪಳ ಬ್ರದರ್ಸ್ ಮಣಿಮುಂಡ ಇವರ ನೇತೃತ್ವದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
      ಉಪ್ಪಳ ವ್ಯಾಪಾರ ಭವನ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾ. ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಮೊಹಮ್ಮದ್ ಅಝೀಂ ಮಣಿಮುಂಡ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಫರೀದಾ ಝಕೀರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಂಗಲ್ಪಾಡಿ ಗ್ರಾ. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಬಿ.ಎಂ. ಮುಸ್ತಫ, ಸದಸ್ಯೆ ಝೀನತ್ ಝಕರಿಯ, ವಿವಿಧ ವಲಯಗಳ ಪ್ರಮುಖರಾದ ಅಶ್ರಫ್ ರಂಜಾನ್, ಹಾಜಿ ನೂರ್ ಮೊಹಮ್ಮದ್, ಇಸ್ಮಾಯಿಲ್ ಅಬೂಬಕ್ಕರ್, ಶಬೀರ್ ಇಸ್ಮಾಯಿಲ್, ಸಿಶಾನ್, ಅಪೀಝ್ ರಹ್ಮಾನ್, ಮೊಹಮ್ಮದ್ ರಫೀಕ್, ರೇಶ್ಮಾ ರಫೀಕ್, ಅಬ್ದುಲ್ ಅಝೀಝ್, ಝುಬೈರ್ ಮೊದಲಾದವರು ಮಾತನಾಡಿದರು. ಮೊಹಮ್ಮದ್ ಮುಸ್ಹಬ್ ಸ್ವಾಗತಿಸಿ, ಮೊಹಮ್ಮದ್ ಶಿಯಾನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries