ಕಾಸರಗೋಡು: ಕಾಸರಗೋಡು ಜಿಲ್ಲೆಯ 10 ಪೋಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ಪ್ರಕಟಿಸಿದ್ದಾರೆ.
ಡಿ.15ರಂದು ರಾತ್ರಿ 12 ಗಂಟೆಯಿಂದ ಡಿ.17 ರಂದು ರಾತ್ರಿ 12 ಗಂಟೆ ವರೆಗೆ ಸಿ.ಆರ್.ಪಿ.ಸಿ. 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕಾನೂನು-ಶಾಂತಿ ಪಾಲನೆ ಖಚಿತಪಡಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಪೂರ್ಣರೂಪದಲ್ಲಿ, ಕುಂಬಳೆ ಪೋಲೀಸ್ ಠಾಣೆ ವ್ಯಾಪ್ತಿಯ ಕುಂಬಳೆ ಪೇಟೆ, ಬಮದ್ಯೋಡು, ಅಡ್ಕ, ಸೀತಾಂಗೋಳಿ, ಉಳುವಾರು, ಮೊಗ್ರಾಲ್, ಬಂಬ್ರಾಣ, ಮಂಜೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ, ಮಂಜೇಶ್ವರ, ಹೊಸಂಗಡಿ, ಕುಂಜತ್ತೂರು, ಆದೂರು ಪೆÇಲೀಸ್ ಟಾಣೆ ವ್ಯಾಪ್ತಿಯ ಬೋವಿಕ್ಕಾನ, ಇರಿಯಣ್ಣಿ, ಅಡೂರು, ಹೊಸದುರ್ಗ ಪೋಲೀಸ್ ಟಾಣೆ ವ್ಯಾಪ್ತಿಯ ಕಾಞಂಗಾಡ್ ನಗರಸಭೆ, ಅಜಾನೂರು ಗ್ರಾಮ ಪಂಚಾಯತ್ , ಬೇಕಲ ಪೋಲೀಸ್ ಟಾಣೆ ವ್ಯಾಪ್ತಿಯ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್, ಚಂದೇರ ಪೋಲೀಸ್ ಟಾಣೆ ವ್ಯಾಪ್ತಿಯ ಪಡನ್ನ, ಚೆರುವತ್ತೂರು, ಪಿಲಿಕೋಡ್ ಗ್ರಾಮ ಪಂಚಾಯತ್ ಗಳು, ನೀಲೇಶ್ವರ ಪೋಲೀಸ್ ಠಾಣೆ ವ್ಯಾಪ್ತಿಯ ನೀಲೇಶ್ವರ ನಗರಸಭೆ ಪ್ರದೇಶಗಳ ನಿಷೇಧಾಜ್ಞೆ ಜಾರಿಗೊಂಡಿದೆ.
ಈ ಪ್ರದೇಶಗಳಲ್ಲಿ ಜನ ಗುಂಪು ಸೇರುವುದು, ಮೆರವಣಿಗೆ ನಡೆಸುವುದು, ಆಯುಧ ಇರಿಸಿಕೊಳ್ಳುವುದು ಇತ್ಯಾದಿಗಳನ್ನೂ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


