ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತಗಣನೆ ಡಿ.16ರಂದು ನಡೆಯಲಿದ್ದು, ಮತಗಣನೆಯ ಫಲಿತಾಂಶ ಯಥಾಸಮಯಕ್ಕೆ ಅರಿತುಕೊಳ್ಳುವ ನಿಟ್ಟಿನಲ್ಲಿ ಕಸರಗೋಡು ವಾರ್ತಾ ಇಲಾಖೆ ಕಚೇರಿ ವಿಸ್ತೃತ ಸಿದ್ಧತೆ ನಡೆಸಿದೆ.
ಈ ಕುರಿತು ಮಧ್ಯಮಗಳಿಗೆ ಯಥಾಸಮಯಕ್ಕೆ ಮಾಹಿತಿಗಳನ್ನು ಒದಗಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಪ್ ಡೇಟ್, ಗ್ರಾಫಿಕ್ಸ್ ಸೌಲಭ್ಯಗಳೂ ಇರುವುವು. ಮತಗಣನೆ ಕೇಂದ್ರಗಳಿಂದ ಯಥಾಸಮಯಕ್ಕೆ ಫಲಿತಾಂಶಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮಧ್ಯಮ ನಿಯಂತ್ರಣ ಕೊಠಡಿಯ ಬೃಹತ್ ತೆರೆ (ಬಿಗ್ ಸ್ಕ್ರೀನ್) ಯಲ್ಲಿ ಪ್ರಕಟಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಕಟ್ಟುನಿಟ್ಟು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಈ ಕೊಠಡಿಗೆ ಪ್ರವೇಶಾತಿ ಇರುವುದಿಲ್ಲ. ಇಲ್ಲಿನ ಮಾಹಿತಿಗಳನ್ನು ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆಯ ಫೆಸ್ ಬುಕ್ ಪುಟಗಳ ಮೂಲಕ ಯಥಾಸಮಯಕ್ಕೆ ಪ್ರಕಟಿಸಲಾಗುವುದು. ಪಿ.ಆರ್.ಡಿ. ಲೈವ್ ಅಪ್ಲಿಕೇಶನ್ ಮೂಲಕವೂ, ಚುನಾವಣೆ ಆಯೋಗದ ಟ್ರೆಂಡ್ಸ್ ವೆಬ್ ಸೈಟ್ ಮೂಲಕವೂ ಚುನಾವಣೆ ಫಲಿತಾಂಶಗಳನ್ನು ಅರಿಯಬಹುದು. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಫಲಿತಾಂಶ ಅರಿಯಲು :https://prdlive.kerala.gov.in/


