ಮುಸ್ತಾಕ್ 327 ಮತಗಳನ್ನು ಪಡೆದರು. ಎಲ್‌ಡಿಎಫ್ ಅಭ್ಯರ್ಥಿ ಸಿದ್ದೀಕ್ ಚೆರಂಗೈ 255 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಮನೋಹರನ್ 217 ಮತಗಳನ್ನು ಪಡೆದರು. ಎರಡನೇ ವಾರ್ಡ್‌ನಲ್ಲಿ ಮುಸ್ಲಿಂ ಲೀಗ್‌ನ ಅಬ್ಬಾಸ್ ಬೇಗಂ 232 ಮತಗಳಿಂದ ಜಯಗಳಿಸಿದ್ದಾರೆ. ಅಬ್ಬಾಸ್ 510 ಮತ್ತು ಅವರ ಎದುರಾಳಿ ಮಾಮು ಕೊಪ್ಪರಾ 281 ಮತಗಳನ್ನು ಪಡೆದರು. ಬಿಜೆಪಿಗೆ 46 ಮತಗಳು ಬಂದಿವೆ. ಕಳೆದ ಬಾರಿ ಮುಸ್ಲಿಂ ಲೀಗ್ ರೆಬೆಲ್ ಅಭ್ಯರ್ಥಿ ಗೆದ್ದ ಪ್ರದೇಶವನ್ನು ವಯಲ್ ವಾರ್ಡ್ ಲೀಗ್ ವಶಪಡಿಸಿಕೊಂಡಿದೆ. ಇಲ್ಲಿ ಮುಸ್ಲಿಂ ಲೀಗ್‌ನ ಶಮ್ಸಿದಾ ಫಿರೋಜ್ 172 ಮತಗಳಿಂದ ಜಯಗಳಿಸಿದ್ದಾರೆ.
ಇತರ ಮೂರು ವಾರ್ಡ್ ಗಳಲ್ಲಿ ಬಿಜೆಪಿ ವಿಜಯಗಳಿಸಿದೆ.
ಬಿಜೆಪಿ ಲೀಡ್:
ಕಾರಡ್ಕ ಗ್ರಾ.ಪಂ.ನಲ್ಲಿ ಈವರೆಗೆ ಬಿಜೆಪಿ ಮುನ್ನಡೆಯಲ್ಲಿ.
ರಾಜ್ಯದ 18 ಗ್ರಾ.ಪಂ.ಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.

