ಉಪ್ಪಳ: ಉಪ್ಪಳದ ರಾಫಿಯಾ ಅಕ್ಷರಗಳನ್ನು ಜೋಡಿಸಿ ರಚಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಆರೋಗ್ಯ ಸಚಿವೆ ಶೈಲಜ ಟೀಚರ್, ಮುಖ್ಯಂತ್ರಿ ಜೊತೆಯಿರುವ ಒಟ್ಟು ಎರಡು ಪೆÇಟೋಗಳನ್ನು ರಾಫಿಯಾ ಮುಖ್ಯಂತ್ರಿಯವರಿಗೆ ಹಸ್ತಾಂತರಿಸಿ ಅವರ ಅಭಿನಂದನೆಯನ್ನು ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಉಪ್ಪಳದಲ್ಲಿ ಎಡರಂಗದ ಅಭಿವೃದ್ದಿ ಮುನ್ನಡೆ ಜಾಥಾದ ಉದ್ಘಾಟನೆಗೆ ಆಗಮಿಸಿದ ವೇಳೆ ವೇದಿಕೆಯಲ್ಲಿ ಹಸ್ತಾಂತರಿಸಿದ್ದಾರೆ. ಪ್ರಧಾನ ಮಂತ್ರಿ ಸಹಿತ ವಿವಿಧ ಗಣ್ಯ ವ್ಯಕ್ತಿಗಳು, ಸಿನಿಮ ತಾರೆಯರ ಸಹಿತ ಸುಮಾರು 150ರಷ್ಟು ಚಿತ್ರಗಳನ್ನು ರಚಿಸಿ ಈಗಾಗಲೇ ರಾಫಿಯಾ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕಾಸರಗೋಡು ನಿವಾಸಿಯಾದ ಕೊಲ್ಲಿ ಉದ್ಯೋಗಿ ಇರ್ಷಾದ್ ರ ಪತ್ನಿಯಾಗಿರುವ ರಾಫಿಯಾ ಉಪ್ಪಳ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಖಾದರ್-ಅಂಗನವಾಡಿ ಕಾರ್ಯಕರ್ತೆ ಜುಬೈದ ದಂಪತಿ ಪುತ್ರಿಯಾಗಿದ್ದಾರೆ.


