ಬದಿಯಡ್ಕ: ಮಾರ್ಪನಡ್ಕ ಜಯನಗರದ ದುರ್ಗಾ ಫ್ರೆಂಡ್ಸ್ ಕ್ಲಬ್‍ನ 20ನೇ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಮಾರ್ಪನಡ್ಕದ 'ಪ್ರಯರಾಗಂ'ನಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಹರೀಶ ಗೋಸಾಡ, ಅಧ್ಯಕರಾಗಿ ರಂಜಿತ್ ಅಗಲ್ಪಾಡಿ, ಉಪಾಧ್ಯಕ್ಷರುಗಳಾಗಿ ನಾರಾಯಣ ಮಾರ್ಪನಡ್ಕ, ದೀಕ್ಷಿತ್ ಅಗಲ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಬಿ.ಕೆ. ಜೊತೆಕಾರ್ಯದರ್ಶಿಗಳಾಗಿ ರಾಜೇಶ್, ಮಹೇಶ್ ಮತ್ತು ಖಜಾಂಜಿಯಾಗಿ ಯತೀಶ್ ಅಗಲ್ಪಾಡಿ, ಕಾರ್ಯನಿರ್ವಾಹಕ ಸಮಿತಿ ಸದಸ್ಯರುಗಳಾಗಿ ಶಿವಪ್ರಸಾದ್, ಶೋಭಿತ್, ಮನೋಹರ, ಉದಯ, ಗುರುಪ್ರಸಾದ್, ರಕ್ಷಿತ್, ಕಿರಣ್, ಗೋಕುಲ್ ಇವರನ್ನು ಅರಿಸಲಾಯಿತು.

