ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಕ್ಷೀಣಿಸುತ್ತಿದೆ. ಟೆಸ್ಟ್ ಸಕಾರಾತ್ಮಕತೆ ದರವು ಐದಕ್ಕಿಂತ ಕಡಿಮೆಯಾಗಿದೆ. ನಿನ್ನೆಯಿಂದ ಲಸಿಕೆಗಳ ವಿತರಣೆಗೆ ಅನುಕೂಲವಾಗುವಂತೆ ಖಾಸಗಿ ವಲಯ ಸೇರಿದಂತೆ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಕೋವಿಡ್ ತೀವ್ರಾವಸ್ಥೆಯನ್ನು ದಾಟಿ ಇದೀಗ ಕುಸಿತದ ಹಾದಿಯಲ್ಲಿದೆ ಎಂದು ಅಂಕಿ ಅಂಶಗಳು ಸೂಚಿಸುತ್ತವೆ. ಕಳೆದ ಎರಡು ದಿನಗಳಲ್ಲಿ 5 ಕ್ಕಿಂತ ಕಡಿಮೆ ಪರೀಕ್ಷಾ ಸಕಾರಾತ್ಮಕತೆಯ ದರ ಇರುವುದು ಸಮಧಾನಕರವೆನಿಸಿದೆ. ಜನವರಿಯ ಆರಂಭದಲ್ಲಿ, ರೋಗಿಗಳ ಸಂಖ್ಯೆ 70,000 ಮೀರಿತ್ತು ಮತ್ತು ಈಗದು 45,000 ಕ್ಕಿಂತ ಕಡಿಮೆಯಾಗಿದೆ.
ದೈನಂದಿನ ಕೋವಿಡ್ ಮೃತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸೋಂಕಿಗೆ ಒಳಗಾಗುವ ಆರೋಗ್ಯ ಕಾರ್ಯಕರ್ತರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ. ವ್ಯಾಪಕವಾಗಿ ದೂರು ನೀಡಲಾಗಿರುವ ಲಸಿಕೆ ಪೂರೈಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ.



