ಕಾಸರಗೋಡು: ಸ್ಟೇಜ್ ಆರ್ಟಿಸ್ಟ್- ವರ್ಕರ್ಸ್ ಅಸೋಸಿಯೇಷನ್(ಸವಾಕ್)ನ ಕಾಞಂಗಾಡು ಬ್ಲಾಕಿನ ಸಮಾವೇಶ ಶುಕ್ರವಾರ ಬೆಳಿಗ್ಗೆ ತ್ರಿಕ್ಕನ್ನಾಡಿನಲ್ಲಿ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಲಕ್ಷ್ಮಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
, ಸಮಾರಂಭವನ್ನು ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಕೇರಳ ತುಳು ಅಕಾಡೆಮಿ ಅಧ್ಯಕ್ಷರೂ,ಸವಾಕ್ ಜಿಲ್ಲಾ ಅಧ್ಯಕ್ಷರಾದ ಉಮೇಶ್.ಎಂ.ಸಾಲಿಯಾನ್, ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಮೇಲ್ಶಾಂತಿ ನವೀನ್ ಚಂದ್ರ ಕಾಯತ್ರ್ತಾಯ ಮುಂತಾದವರು ಭಾಗವಹಿಸಿದರು.
ಸವಾಕ್ ಜಿಲ್ಲಾ ಕಾರ್ಯದರ್ಶಿ ಸನ್ನಿ ಆಗಸ್ಟಿನ್, ತಿಡಂಬು ನೃತ್ಯ ಕಲಾವಿದ ಉಪೇಂದ್ರ ಭಟ್, ಸವಾಕ್ ಜಿಲ್ಲಾ ಜೊತೆ ಕಾರ್ಯದರ್ಶಿ ರಾಜೇಶ್ ತ್ರಿಕ್ಕನ್ನಾಡು,ಜಿಲ್ಲಾ ಉಪಾಧ್ಯಕ್ಷರಾದ ಭಾರತಿ ಬಾಬು, ಪಿ.ದಿವಾಕರ ಕಾಸರಗೋಡು, ಜಿಲ್ಲಾ ಕಾರ್ಯದರ್ಶಿ ರವೀಂದ್ರನ್ ನಾಯರ್, ಜಿಲ್ಲಾ ಖಜಾಂಜಿ ಚಂದ್ರಹಾಸ ಕಯ್ಯಾರ್ , ಸವಾಕ್ ನೀಲೇಶ್ವರ ಬ್ಲಾಕ್ ಅಧ್ಯಕ್ಷ ಎಂ.ಎಂ.ಗಂಗಾಧರನ್, ನರೇಂದ್ರ ಪಿಲಿಕುಂಜೆ , ಕಾಸರಗೋಡು ಬ್ಲಾಕ್ ಅಧ್ಯಕ್ಷ ದಯಾಪ್ರಸಾದ್ ಪಿಲಿಕುಂಜೆ, ವನಜ ಮುಂತಾದವರು ಶುಭಾಶಂಸನೆಗೈದರು.
ಕು.ಶಿವರಂಜಿನಿ ಪ್ರಾರ್ಥನೆ ಹಾಡಿದರು.ನೃತ್ಯ ಕಲಾವಿದರಿಂದ ರಂಗಪೂಜಾ ನಿತ್ಯದ ಬಳಿಕ ಪ್ರಜೀಶ್(ಅಧ್ಯಾಪಕ, ಕರ್ಮ ನೃತ್ಯ ಶಾಲೆ ಪಾಲಕುನ್ನು )ಸ್ವಾಗತಿಸಿ, ಶೈಜು ಬೇಕಲ್ (ನಟನ ಕೈರಳಿ ನೃತ್ಯ ವಿದ್ಯಾಲಯ, ಪಳ್ಳಿಕೆರೆ) ವಂದಿಸಿದರು.
ಕಾಞಂಗಾಡು ಬ್ಲಾಕ್ ನೂತನ ಪದಾಧಿಕಾರಿಗಳಾಗಿ ಆದಿಶಕ್ತಿ ನಾರಾಯಣನ್(ಅಧ್ಯಕ್ಷ), ಅಶ್ವಥಿ(ಉಪಾಧ್ಯಕ್ಷೆ), ಶೈಜು ಮಾಸ್ತರ್(ಕಾರ್ಯದರ್ಶಿ), ದಿಲೀಪ್(ಜೊತೆ ಕಾರ್ಯದರ್ಶಿ), ಮನೋಜ್ ಮೇಘ(ಖಜಾಂಚಿ),ಸದಸ್ಯರುಗಳಾಗಿ ಪ್ರಜೀಶ್ ಮಾಸ್ತರ್, ಜ್ಯೋತಿ ಲಕ್ಷ್ಮಿ, ಸುಕು ಪಳ್ಳಂ, ಉಪೇಂದ್ರ ಭಟ್, ಅಡ್ಕ, ಅಕ್ಷಿತ, ಶ್ಯಾಮ್ ಪ್ರಸಾದ್,ನೂಪುರ ನಾರಾಯಣನ್ ಆಯ್ಕೆಗೊಂಡರು.



