ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯಾನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ಬಾಲಕರ ಮತ್ತು ಬಾಲಕಿಯರ ಪೆÇೀಸ್ಟ್ ಮೆಟ್ರಿಕ್ ಹಾಸ್ಟೆಲ್, ಮಂಜೇಶ್ವರ ಗೋವಿಂದಪೈ ಕಾಲೇಜಿನ ಬಳಿಯ ಹುಡುಗರ ಪೆÇೀಸ್ಟ್ ಮೆಟ್ರಿಕ್ ಹಾಸ್ಟೆಲ್ ನಲ್ಲಿ ಪರಿಶಿಷ್ಟ ಜಾತಿಗೊಳಪಟ್ಟ ಅಂಗೀಕೃತ ಕಾಲೇಜು ಯಾ ಐ.ಟಿ.ಐ. ಗಳಲ್ಲಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಸೀಟುಗಳು ತೆರವಾಗಿದೆ. ಆಫ್ ಲೈನ್ ತರಗತಿಗಳು ಆರಂಭಗೊಂಡವರಿಗಾಗಿ ಮಾತ್ರ ಪ್ರವೇಶಾತಿ ಕಲ್ಪಿಸಲಾಗಿದೆ. ವಸತಿ, ಭೋಜನ ಇತ್ಯಾದಿ ಉಚಿತವಾಗಿರುವುದು. ಆಸಕ್ತರು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯನ್ನು (ದೂರವಾಣಿ ಸಂಖ್ಯೆ: 04994-256162.)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

