ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾ ಕಚೇರಿಗೆ ತಾತ್ಕಾಲಿಕ ನೆಲೆಯಲ್ಲಿ ಛಾಯಾಗ್ರಾಹಕರ ಪಾನೆಲ್ ರಚನೆ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಅರ್ಜಿಗಳನ್ನು ಅ.25ರ ಸಂಜೆ 5 ಗಂಟೆಗೆ ಮುಂಚಿತವಾಗಿ ಜioಞsಜ@gmಚಿiಟ.ಛಿom ಎಂಬ ಈ-ಮೇಲ್ ವಿಳಾಸಕ್ಕೆ ಯಾ ಕಾಸರಗೋಡು ಜಿಲ್ಲಾ ವಾರ್ತಾ ಕಚೇರಿ, ಸಿವಿಲ್ ಸ್ಟೇಷನ್, ವಿದ್ಯಾನಗರ-ಅಂಚೆ, ಕಾಸರಗೊಡು, 671121 ಎಂಬ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಈ ಸಂಬಂಧ ಸಂದರ್ಶನ ಅ.29ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ವಾರ್ತಾ ಕಚೇರಿಯಲ್ಲಿ ನಡೆಯಲಿದೆ. ಈಗಾಗಲೇ ವಾರ್ತಾ ಇಲಾಖೆಯಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ, ಸುದ್ದಿ ಮಾಧ್ಯಮಗಳಲ್ಲಿ ಛಾಯಾಗ್ರಾಹಕರಾಗಿ ಅನುಭವ ಹೊಂದಿರುವ, ವೈಫೈ ಸೌಲಭ್ಯ ಹೊಂದಿರುವ ಕ್ಯಾಮರಾ ಹೊಂದಿರುವ ಮಂದಿಗೆ ಆದ್ಯತೆಯಿದೆ. ಅರ್ಜಿದಾರರು ಡಿಜಿಟಲ್ ಎಸ್.ಎಲ್.ಆರ್/ ಮಿರರ್ ಲೆಸ್ ಕೆಮರಾ ಬಳಸಿ ಹೈ ರೆಸಲ್ಯೂಷನ್ ಚಿತ್ರಗಳನ್ನು ಕ್ಲಿಕ್ಕಿಸುವ ಪರಿಣತಿ ಹೊಂದಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9496003201)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

