ಕಾಸರಗೋಡು: ನವರಾತ್ರಿ ಪ್ರಯುಕ್ತ ಚಿನ್ಮಯ ವಿದ್ಯಾಲಯದಲ್ಲಿ ಕೋವಿಡ್-19ರ ನಿಬಂಧನೆ ಪಾಲಿಸಿಕೊಂಡು ಆನ್ಲೈನ್ ಮೂಲಕ ಮಾತೃ ಪೂಜನ ಕಾರ್ಯಕ್ರಮ ಜರುಗಿತು.
ಚಿನ್ಮಯ ಮಿಷನ್ ಕೆರಳ ಘಟಕದ ಮುಖ್ಯಸ್ಥ ಹಾಗೂ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಮಾತೃ ಪೂಜೆಯ ಪ್ರಾಧಾನ್ಯತೆಯ ಬಗ್ಗೆ ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ಮಾತೃ-ಪುತ್ರ ಸಂಬಂಧ ಕಳಂಕಗೊಳ್ಳುವ ಈ ಸಂದರ್ಭದಲ್ಲಿ ತಾಯಿಯಿಂದ ಪ್ರೀತಿ, ವಾತ್ಸಲ್ಯ, ವಿಶ್ವಾಸದ ನಿರ್ವZ ನೀಯ ಅನುಭವವನ್ನು ಮಕ್ಕಳಿಗೆ ವರ್ಗಾಯಿಸುವಲ್ಲಿ ಮಾತೃ ಪೂಜೆ ಸಹಕಾರಿಯಾಗಬೇಕು. ಅಲ್ಲದೆ ಹೆತ್ತವರು ಬಾಲ್ಯ ದಿಂದಲೇ ಜೀವನ ಮೌಲ್ಯವನ್ನು ಮಕ್ಕಳಿಗೆ ತಿಳಿಸಿ ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳು ತಾಯಂದಿರ ಪಾದಪೂಜೆ ನಡೆಸಿ, ಆಶೀರ್ವಾದ ಪಡೆದರು . ಅಧ್ಯಾಪಕ ರಾಮಗಣೇಶ ಹಾಗೂ ಅಧ್ಯಾಪಿಕೆ ದಿವ್ಯ ಮಹೇಶ್ ದೇವಿ ಸರಸ್ಪತಿಯ ಹಾಡು ಹಾಡಿದರು. ವಿದ್ಯಾಲಯದ ಪ್ರಾಂಶುಪಾಲರಾದ ಸಂಗೀತ ಪ್ರಭಾಕರನ್ , ಉಪ ಪ್ರಾಂಶು ಪಾಲೆ ಪದ್ಮಾವತಿ. ಪಿ, ಡೈರೆಕ್ಟರ್ ಬಿ. ಪುಷ್ಪರಾಜ್ , ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮ .ಎಸ್.ಆರ್, ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು.

