ಕಾಸರಗೋಡು: ಕೇರಳ ಸರ್ಕಾರದ ಆದ್ರ್ರಂ ಯೋಜನೆಯನ್ವಯ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮಂಜೂರಾದ ತೈಕಪ್ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸವನ್ನು ಶಾಸಕ ಎಂ. ರಾಜಗೋಪಾಲನ್ ನೆರವೇರಿಸಿದರು.
ಕರಾವಳಿ ಪ್ರದೇಶದ ನೂರಾರು ಮಂದಿ ಮೀನುಗಾರರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಶ್ರಯಿಸುತ್ತಿದ್ದು, ಹೊಸ ಕಟ್ಟಡ ನಿರ್ಮಾಣಕ್ಕಾಗಿ ದೀರ್ಘ ಕಾಲದಿಂದ ಬೇಡಿಕೆಯಿರಿಸಲಾಗಿತ್ತು. ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ಪಿ ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ವಿ ಮಹಮ್ಮದ್ ರಾಫಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಪಿ ರವೀಂದ್ರನ್, ಪಿ.ಗೌರಿ, ಪಿ.ಸುಭಾಷ್, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಸ್ಥಾಯೀ ಸಮಿತಿ ಸದಸ್ಯೆ ಟಿ,ಪಿ ಲತಾ ಸ್ವಾಗತಿಸಿದರು. ವೈದ್ಯಾಧಿಕಾರಿ ಡಾ> ಶಾರದಾ ಎಸ್. ವಂದಿಸಿದರು.

