ಕಾಸರಗೋಡು: ಜನಪರ ಯೋಜನಾ ವ್ಯವಸ್ಥೆ ಉತ್ತರ ಕೇರಳದ ಅಬಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿರುವುದಾಗಿ ಕೇರಳದ ಮಾಜಿ ಸಚಿವ, ಡಾ. ಥಾಮಸ್ ಐಸಾಕ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ನದಿ ದಡ ಅಭಿವೃದ್ಧಿ ಕಾರ್ಯಾಗಾರ, ಜನಪ್ರತಿನಿಧಿಗಳು, ಯೋಜನಾ ಸಮಿತಿ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜನಪ್ರತಿನಿಧಿಗಳಾದ ಟಿ.ಪಿ ಗೋವಿಂದನ್, ಎಂ.ಸಿ ಕಮರುದ್ದೀನ್, ಪಿ.ಎ ಅಶ್ರಫಲಿ, ನಾರಾಯಣನ್ ಮಾಸ್ಟರ್, ಪ್ರಭಾಕರ ಚೌಟ, ಪುಷ್ಪಾ ಅಮೆಕ್ಕಳ, ಚಂದ್ರಶೇಖರ ದೇಲಂಪಾಡಿ, ಎಂ. ಶಂಕರ ರೈ ಮುಂತಾದವರು ಉಪಸ್ಥಿತರಿದ್ದರು.

