ಕುಂಬಳೆ: ಇತಿಹಾಸ ಪ್ರಸಿದ್ದ ಮುಜುಂಗಾವು ಶ್ರೀಪಾರ್ಥಸಾರಥಿ ಶ್ರಿಕೃಷ್ಣ ದೇವಾಲಯದಲ್ಲಿ ಕಾವೇರಿ ಸಂಕ್ರಮಣದ ಪ್ರಯುಕ್ತ ಭಾನುವಾರ ಕೋವಿಡ್ ಮಾನದಂಡಗಳಿಗೆ ಅನುಸಾರ ಸಾಂಪ್ರದಾಯಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸಲಾಗಿತ್ತು.
ಭಾನುವಾರ ಮುಂಜಾನೆ ಶ್ರೀಕ್ಷೇತ್ರದ ತಂತ್ರಿವರ್ಯ ಗಣೇಶ ತಂತ್ರಿ ಅವರು ಕ್ಷೇತ್ರದ ಮುಂಭಾಗದ ಪವಿತ್ರ ಕೆರೆಯಲ್ಲಿ ಪೂಜೆ ಸಲ್ಲಿಸಿ ತೀರ್ಥದೊಂದಿಗೆ ದೇವರ ಸನ್ನಿಧಿಗೆ ಆಗಮಿಸಿದರು. ಬಳಿಕ ಶ್ರೀಪಾರ್ಥಸಾರಥಿಗೆ ಅಭಿಷೇಕಗಳೊಂದಿಗೆ ಪೂಜೆ ನೆರವೇರಿತು.
ಪ್ರತಿವರ್ಷವೂ 40 ಸಾವಿರದಷ್ಟು ಸಂಖ್ಯೆಯ ಭಕ್ತರು ಆಗಮಿಸಿ ಪವಿತ್ರ ಕೆರೆಯಲ್ಲಿ ತೀರ್ಥಸ್ಥಾನ ಮಾಡುವುದು ವಾಡಿಕೆ. ಇಲ್ಲಿಗೆ ಹರಕೆಹೊತ್ತು ತೀರ್ಥಸ್ನಾನಗ್ಯೆದರೆ ಚರ್ಮ ವ್ಯಾದಿಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆಯೇ ಈ ವರ್ಷವೂ ಪವಿತ್ರ ಸ್ನಾನ ನಿಷೇಧಿಸಲಾಗಿತ್ತು. ಆದರೂ ಭಾನುವಾರ ಆರು ಸಾವಿರದಷ್ಟು ಜನರು ಆಗಮಿಸಿ ದೇವರ ದರ್ಶನ ಪಡೆದರು.

