ಕುಂಬಳೆ: ಕುಂಬಳೆ ಮುಳಿಯಡ್ಕ ನಿವಾಸಿಗಳಾದ ಸುಬೈರ್ ಹಾಗೂ ಸಿನಾನ್ ಎಂಬವರು ಭಾರತ, ನೇಪಾಳ, ಭೂತಾನ್ ಮೊದಲಾದ ದೇಶಗಳನ್ನು ಕಾಲ್ನಡಿಗೆಯಲ್ಲಿ ಸಚರಿಸಲು ಪ್ರಯಾಣ ಆರಂಭಿಸಿದರು.
ಹದಿಮೂರು ಸಾವಿರಕ್ಕಿಂತಲೂ ಅಧಿಕ ದೂರವನ್ನು ಕಾಲ್ನಡಿಗೆ ಮೂಲಕ ಸಾಗಲು ಒಂದೂವರೆ ವರ್ಷಗಳ ಅಂದಾಜು ಯೋಜನೆಯನ್ನು ಇವರಿಬ್ಬರು ಯುವಕರು ಈಗ ನಿರ್ಧರಿಸಿದ್ದು, ಮನುಷ್ಯ ಹೃದಯಗಳನ್ನು ಒಗ್ಗೂಡಿಸಿ ಶಾಂತಿ ಸಂದೇಶ ಸಾರಲು ಈ ಕಾಲ್ನಡಿಗೆ ಸಂಚಾರ ರೂಪಿಸಲಾಗಿದೆ ಎಮದವರು ತಿಳಿಸಿದ್ದಾರೆ.
ಪ್ರಯಾಣವನ್ನು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಪರಿವೀಕ್ಷಕ ಬಿ.ಅಶ್ರಫ್, ಕುಂಬಳೆ ಸರ್ಕಲ್ ಇನ್ಸ್ಫೆಕ್ಟರ್ ಪಿ. ಪ್ರಮೋದ್ ಜಂಟಿಯಾಗಿ ಧ್ಚಜ ಹಾರಿಸಿ ಉದ್ಘಾಟಿಸಿದರು. ಎಸ್.ಐ.ರಾಜೀವನ್, ಹೈದರ್ ಲಬಾಂಬ ಉಪಸ್ಥಿತರಿದ್ದರು.

