ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ "ಆಝಾದಿ ಕಾ ಅಮೃತ್ ಮಹೋತ್ಸವ್" ನ ಅಂಗವಾಗಿ ವಿದ್ಯಾರ್ಥಿಗಳ ಸ್ವಾತಂತ್ರ್ಯ ಹೋರಾಟ ಸಂದೇಶ ಸ್ಮೃತಿ ಯಾತ್ರೆ ನ.27,28ರಂದು ಕಾಸರಗೋಡು ಜಿಲ್ಲೆಯಲ್ಲಿ ಪರ್ಯಟನೆ ನಡೆಸಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನೇತೃಥ್ವದಲ್ಲಿ ಸಮಗ್ರ ಶಿಕ್ಷಣ ಕೇರಳ ಮತ್ತು ಡಯಟ್ ವತಿಯಿಂದ "ಚಿರಸ್ಮರಣೆ" ಎಂಬ ಹೆಸರಿನಲ್ಲಿ ಸ್ಮೃತಿ ಯಾತ್ರೆ ನಡೆಯಲಿದೆ. ಯಾತ್ರೆಯಲ್ಲಿ ಭಾಗವಹಿಸುವ ಮಕ್ಕಳು ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಕೇಂದ್ರಗಳಲ್ಲಿ ಸಂದರ್ಶನ ನಡೆಸಿ ಹಿರಿಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವರು. ಸ್ವಾತಂತ್ರ್ಯ ಹೋರಾಟ ಇತಿಹಾಸ ಸಂಬಂಧ ಕಾಸರಗೋಡು ಜಿಲ್ಲೆಯ ಕಿರಿಯ ಪ್ರಾಥಮಿಕ ವಿಭಾಗದಿಂದ ಹೈಯರ್ ಸೆಕೆಂಡರಿ ವರೆಗಿನ ತರಗತಿಗಳ ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳ ಜಿಲ್ಲಾ ಮಟ್ಟದ ವಿಜೇತರಾದ 36 ಮಂದಿ ಸ್ಮೃತಿಯಾತ್ರೆಯಲ್ಲಿ ಪಾಲ್ಗೊಳ್ಳುವರು. ಜಿಲ್ಲೆಯ ಶಿಕ್ಷಣಾಧಿಕಾರಿಗಳು, ಸಮಾಜ ವಿಜ್ಞಾನ ಕ್ಲಬ್ ಸಂಚಾಲಕರು, ಹಿರಿಯ ಜನಪ್ರತಿನಿಧಿಗಳು ಯಾತ್ರೆಯನ್ನು ಬೆಂಬಲಿಸುವರು.
ಸ್ವಾತಂತ್ರ್ಯ ಹೋರಾಟ ಸ್ಮೃತಿ ಯಾತ್ರೆಗೆ ಮಂಜೇಶ್ವರ ಗಿಳಿವಿಂಡುವಿನಲ್ಲಿ ನಡೆಯುವ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಚಾಲನೆ ನೀಡುವರು. ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮೊದಲಾದವರು ಉಪಸ್ಥಿತರಿರುವರು.
ನಂತರ ನಡೆಯುವ ಪರ್ಯಟನೆಯ ವೇಳೆ ತಳಂಗರೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಬೇಕಲಕೋಟೆಯಲ್ಲಿ ಶಾಸಕ ಸಿ.ಎಚ್.ಕುಂಞಂಬು, ವೆಳ್ಳಿಕೋತ್ ನಲ್ಲಿ ಶಾಸಕ ಇ.ಚಂದ್ರಶೇಖರನ್, ಕಯ್ಯೂರಿನಲ್ಲಿ ಶಾಸಕ ಎಂ.ರಾಜಗೋಪಾಲನ್ ಸಮಾರಂಭಗಳನ್ನು ಉದ್ಘಾಟಿಸುವರು. ವಿವಿಧ ನಗರಸಭೆಗಳ ಅಧ್ಯಕ್ಷರುಗಳಾದ ನ್ಯಾಯವಾದಿ ವಿ.ಎಂ.ಮುನೀರ್, ಕೆ.ವಿ.ಸುಜಾತಾ, ಕೆ.ವಿ.ಶಾಂತಾ ಆಯಾ ಸಮಾರಂಭಗಳಲ್ಲಿ ಭಾಗವಹಿಸುವರು. ವಿವಿಧ ಕೇಂದ್ರಗಳಲ್ಲಿ ಇತಿಹಾಸ, ಸಾಂಸ್ಕøತಿಕ ಪರಿಣತರು ಮಕ್ಕಳೊಂದಿಗೆ ಸಂವಾದ ನಡೆಸುವರು. ಗಣ್ಯರಾದ ಕೆ.ಆರ್.ಜಯಾನಂದ, ನಿರ್ಮಲ್ ಕುಮಾರ್ ಕಾಡಗಂ, ಸಿಜಿ ಮಾಥ್ಯೂ, ಪಿ.ಎಸ್.ಹಮೀದ್, ಡಾ.ಪಿ.ಪ್ರಭಾಕರನ್, ಡಾ.ಅಜಯಕುಮಾರ್ ಕೋಡೋತ್, ಪೆÇ್ರ.ವಿ.ಕುಟ್ಯನ್, ಪೆÇ್ರ.ಕೆ.ಪಿ.ಜಯರಾಜನ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಇತರ ಜನಪ್ರತಿನಿಧಿಗಳು ಮೊದಲಾದವರು ವಿವಿಧ ಸಮಾರಂಭಗಳಲ್ಲಿ ಭಾಗವಹಿಸುವರು.
ಕಯ್ಯೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಜನಪ್ರತಿನಿಧಿಗಳ, ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾದ ಸ್ಥಳೀಯ ಕೇಂದ್ರಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ನಡೆದುಬರುತ್ತಿವೆ. ರಚನೆ ಸ್ಪರ್ಧೆಗಳ ಅತ್ಯುತ್ತಮ ಕೃತಿಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ ಉದ್ದೇಶಗಳಿವೆ ಎಂದು ಡಿ.ಡಿ.ಇ. ಕೆ.ವಿ.ಪುಷ್ಪಾ, ಡಯಟ್ ಪ್ರಾಂಶುಪಾಲ ಡಾ.ಎಂ.ಬಾಲನ್, ಎಸ್.ಎಸ್.ಕೆ.ಡಿ.ಪಿ.ಸಿ.ಪಿ.ರವೀಂದ್ರನ್ ತಿಳಿಸಿದರು.

