HEALTH TIPS

ಜೆಎನ್ ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ

               ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ.

            ಅಲೀಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಹಾಗೂ ಜಾಮಿಯಾ ಏರಿಯಾದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶವನ್ನು ನೀಡಿದೆ.

               ಇಮಾಮ್ ವಿರುದ್ಧ ದೇಶದ್ರೋಹದ ಪ್ರಕರಣಗಳ ಜೊತೆಗೆ, ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮ ಸ್ಥಳ, ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ಉಂಟು ಮಾಡಿದ,  ಸಾರ್ವಜನಿಕ ಕಿಡಿಗೇಡಿತನ ಯುಎಪಿಎ ಗಳ ಆರೋಪದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

            ಇದನ್ನೂ ಓದಿ: ಜೆಎನ್ ಯು ಕ್ಯಾಂಪಸ್ ನಲ್ಲಿ ಪಿಹೆಚ್ ಡಿ ವಿದ್ಯಾರ್ಥಿನಿಗೆ 27 ವರ್ಷದ ಯುವಕನಿಂದ ಲೈಂಗಿಕ ಕಿರುಕುಳ; ಆರೋಪಿ ಬಂಧನ

         ಡಿ.2019 ರಲ್ಲಿ ಉಂಟಾದ ಗಲಭೆಗೆ ಮಂದಿಯನ್ನು ಪ್ರಚೋದಿಸಿದ್ದ, ಕೇಂದ್ರ ಸರ್ಕಾರಕ್ಕೆ ನಿಷ್ಠೆ ತೋರದಂತೆ ಜನತೆಯನ್ನು ಪ್ರಚೋದಿಸಿದ್ದ ಆರೋಪಗಳನ್ನು ದೆಹಲಿ ಪೊಲೀಸರು ಇಮಾಮ್ ವಿರುದ್ಧ ಹೊರಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries