ಕಾಸರಗೋಡು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಳಲ್ಲಿ ನಡೆಸುತ್ತಿರುವ ಲೋಕ ಅದಾಲತ್ "ಮನೆ ಬಾಗಿಲಿಗೆ ನ್ಯಾಯ" (ರಿusಣiಛಿe ಚಿಣ ಜooಡಿ sಣeಠಿ) ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಸೆಪ್ಟಂಬರ್ 2 ರಂದು ದೇಲಂಪಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಅದಾಲತ್ ಉದ್ಘಾಟಿಸುವರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಪ ನ್ಯಾಯಾಧೀಶ ಬಿ.ಕರುಣಾಕರನ್ ಅಧ್ಯಕ್ಷತೆ ವಹಿಸುವರು. ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ವಕೀಲೆ ಎ.ಪಿ.ಉಷಾ, ಸಂಬಂಧಪಟ್ಟ ಇಲಾಖಾ ಮುಖ್ಯಾಧಿಕಾರಿಗಳು ಭಾಗವಹಿಸುವರು. ಆಗಸ್ಟ್ 20 ರಿಂದ ಪಂಚಾಯತ್ ಮಟ್ಟದಲ್ಲಿ ದೂರುಗಳ ಸ್ವೀಕಾರ ಕಾರ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಲೋಕ ಅದಾಲತ್ "ಮನೆ ಬಾಗಿಲಿಗೆ ನ್ಯಾಯ" ಯೋಜನೆಯ ಉದ್ಘಾಟನೆ
0
ಆಗಸ್ಟ್ 26, 2022
Tags

