ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಂ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಗೋಶಾಲಾ ಕಟ್ಟಡದ ಶಿಲಾನ್ಯಾಸ, ಗೋಸೂತ್ರ ಹವನ ಹಾಗೂ ಶ್ರೀಚಕ್ರ ಪೂಜೆ ಕಾರ್ಯಕ್ರಮ ಸೆ. 4ರಂದು ಕೊಂಡೆವೂರು ಮಠದ ವಠಾರದಲ್ಲಿ ಜರುಗಲಿದೆ.
ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 8ಕ್ಕೆ ಗೋಸೂತ್ರ ಹವನ, ಪೂರ್ಣಾಹುತಿ, 10.30ಕ್ಕೆ ಗೋಶಾಲೆಗೆ ಶಿಲಾನ್ಯಾಸ ನಡೆಯುವುದು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ರಾಜ್ಯ ಸಭಾ ಸದಸ್ಯ ಕೆ. ನಾರಾಯಣ್ ಬೆಂಗಳೂರು ವಿಂಶತಿ ಕಾರ್ಯಖ್ರಮದ ಲಾಂಛನ ಬಿಡುಗಡೆಗೊಳಿಸುವರು. ಬೆಂಗಳೂರು ಆಕ್ಸ್‍ಫರ್ಡ್ ವಿದ್ಯಾಸಂಸ್ಥೆ ಅಧ್ಯಕ್ಷ ರಮೇಶ್‍ರಾಜು ಗೋಶಾಲೆ ಶಿಲಾನ್ಯಾಸದ ಶಿಲಾಫಲಕ ಅನಾವರಣಗೊಳಿಸುವರು. ಈ ಸಂದರ್ಭ ಅಗ್ನಿವೀರ್ ದೈಹಿಕ ತರಬೇತಿ ಶಿಬಿರವನ್ನು ಮುಂಬೈಯ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಉದ್ಘಾಟಿಸುವರು. ಆಶ್ರಯ ಯೋಜನೆಯನ್ವಯ ನಿರ್ಮಾಣಗೊಂಡ 34ನೇ ಮನೆಯ ಕೀಲಿಕೈ ಹಸ್ತಾಂತರ ಸಮಾರಂಭ ನಡೆಯುವುದು. ಉದ್ಯಮಿಗಳು, ಧಾರ್ಮಿಕ, ಸಾಮಾಜಿಕ ಸೇವಾ ಮುಖಂಡರು ಪಾಲ್ಗೊಳ್ಳುವರು.
ಸಂಜೆ 4ರಿಂದ ಭಜನೆ, ಶ್ರೀಚಕ್ರಪೂಜೆ ನಡೆಯಲಿರುವುದು.
4 ರಂದು ಕೊಂಡೆವೂರು ಮಠದಲ್ಲಿ ಗೋಶಾಲೆಯ ಶಿಲಾನ್ಯಾಸ, ಗೋಸೂತ್ರ ಹವನ
0
ಆಗಸ್ಟ್ 26, 2022
Tags

