ಕಾಸರಗೋಡು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜಾರಿಗೊಳಿಸಿರುವ ವಾಹನ ಸಾಲ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ.
ಮಂಜೂರು ಮಾಡಲಾಗುವ ಗರಿಷ್ಠ ಸಾಲ 10 ಲಕ್ಷ ರೂ. ಆಗಿದ್ದು, ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಮತ್ತು 18 ರಿಂದ 55 ವರ್ಷದೊಳಗಿನವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.3.5 ಲಕ್ಷ ಮೀರಬಾರದು. ಅರ್ಜಿದಾರರು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು. 5 ಲಕ್ಷ ರೂಪಾಯಿವರೆಗಿನ ಸಾಲದ ಮೊತ್ತಕ್ಕೆ 7% ಬಡ್ಡಿದರದಲ್ಲಿ ಮತ್ತು ಅದಕ್ಕಿಂತಲೂ ಹೆಚ್ಚು ಸಾಲ ಪಡೆದರೆ 9% ಬಡ್ಡಿದರ ಆಗಿರುತ್ತದೆ. ಮೊತ್ತವನ್ನು ಬಡ್ಡಿ ಸೇರಿಸಿ 60 ಸಮಾನ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು. ಇ-ಆಟೋ ಖರೀದಿಗೆ ವಿಶೇಷ ಸಾಲ ನೀಡಲಾಗುವುದು. ನಿಗಮದ ನಿಯಮಗಳ ಪ್ರಕಾರ ಈ ಸಾಲದ ಮೊತ್ತವನ್ನು ಪಡೆಯಲು ಸರ್ಕಾರಿ ಅಧಿಕಾರಿಯ ಜಾಮೀನು ಅಥವಾ ಆಸ್ತಿ ಭದ್ರತೆಯನ್ನು ಒದಗಿಸಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕಾಞಂಗಾಡ್ ಬಸ್ ನಿಲ್ದಾಣ ಸನಿಹದ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ಕಾಪೆರ್Çರೇಷನ್ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬಹುದುದೀ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(04672204580, 9400068514)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ.ಜಾತಿ-ಪ.ಪಂಗಡದವರಿಗೆ ವಾಹನ ಸಾಲ ಯೋಜನೆಗೆ ಅರ್ಜಿ ಆಹ್ವಾನ
0
ಆಗಸ್ಟ್ 26, 2022
Tags

