ಕಾಸರಗೋಡು: ಹಬ್ಬಗಳ ಸೀಸನ್ನಲ್ಲಿ ಮಾರುಕಟ್ಟೆ ಮಧ್ಯಸ್ಥಿಕೆಗಳ ಅಂಗವಾಗಿ ಸಪ್ಲೈಕೋ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಓಣಂ ಮೇಳ ಆಗಸ್ಟ್ 27 ರಂದು ಆರಂಭಗೊಳ್ಳಲಿದೆ. ಕಾಞಂಗಾಡ್ ಅಲಮಿಪ್ಪಲ್ಲಿ ಮುನ್ಸಿಪಲ್ ಬಸ್ ನಿಲ್ದಾಣದಲ್ಲಿ ಸೆ.7ರವರೆಗೆ ಈ ಮೇಳ ನಡೆಯಲಿದೆ. ಮೇಳದಲ್ಲಿ ಸಪ್ಲೈಕೋ, ಮಿಲ್ಮಾ, ಕುಟುಂಬಶ್ರೀ ಮೊದಲಾದ ಸಂಸ್ಥೆಗಳು ಸ್ಟಾಲ್ಗಳನ್ನು ಹೊಂದಲಿವೆ. 27 ರಂದು ಆರಂಭಗೊಳ್ಳುವ ಮೇಳವನ್ನು ಮಧ್ಯಾಹ್ನ 3 ಗಂಟೆಗೆ ಬಂದರು, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ಅವರು ಆನ್ಲೈನ್ ಮೂಲಕ ಉದ್ಘಾಟಿಸುವರು. ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ಶಾಸಕರು ಮತ್ತಿತರರು ಭಾಗವಹಿಸುವರು. ಪ್ರತಿದಿನ ಬೆಳಗ್ಗೆ 9.30ರಿಂದ ರಾತ್ರಿ 8ರವರೆಗೆ ಮೇಳ ನಡೆಯಲಿದೆ.
ಸಪ್ಲೈಕೋ ಜಿಲ್ಲಾ ಮಟ್ಟದ ಓಣಂ ಮೇಳಕ್ಕೆ ಇಂದು ಚಾಲನೆ
0
ಆಗಸ್ಟ್ 26, 2022
Tags

