ಕುಂಬಳೆ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕಮಂಡಲದ ಗುಂಪೆವಲಯದ ಕರ್ವಜೆ ವೆಂಕಟ್ರಮಣ ಭಟ್ ಧರ್ಮತ್ತಡ್ಕ ಇವರ ಕುಟುಂಬಕ್ಕೆ ಗುಂಪೆ ವಲಯದ ನೇತೃತ್ವದಲ್ಲಿ ಆರ್ಥಿಕ ಸಹಾಯ ನೀಡಲಾಯಿತು. ಇತ್ತೀಚೆಗೆ ನಿಧನರಾದ ಅವರ ಸಹೋದರ ವಿಷ್ಣು ಭಟ್ಟರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಗಳು ಸಾಂಗವಾಗಿ ನೆರವೇರಿ ಮೃತರಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ ಊರ ಮಹನೀಯರಿಂದ ಸಂಗ್ರಹಿತವಾದ ಮೊತ್ತವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗುಂಪೆ ವಲಯ ನೆರಿಯ ಘಟಕ ಗುರಿಕ್ಕಾರÀ ಎನ್.ಎಚ್. ಲಕ್ಷ್ಮೀನಾರಾಯಣ ಭಟ್, ಮಂಡಲ ಸಹಾಯವಿಭಾಗ ಪ್ರಧಾನರಾದ ಬಿ.ವಿ. ನಾರಾಯಣ ಭಟ್ ಕುಂಚಿನಡ್ಕ, ಮಂಡಲ ಕೋಶಾಧ್ಯಕ್ಷ ಹರಿಪ್ರಸಾದ್ ಪೆರ್ಮುಖ, ಗುಂಪೆ ವಲಯಾಧ್ಯಕ್ಷ ಬಿ.ಎಲ್ ಶಂಭು ಹೆಬ್ಬಾರ್, ಕಾರ್ಯದರ್ಶಿ ಕೇಶವಪ್ರಸಾದ ಎಡಕ್ಕಾನ, ಕೋಶಾಧ್ಯಕ್ಷ ರಾಜಗೋಪಾಲ ಅಮ್ಮಂಕಲ್ಲು, ವೆಂಕಟಕೃಷ್ಣ ಚೆಕ್ಕೆಮನೆ ಮತ್ತಿತರರು ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರುವ ಕುಟುಂಬಕ್ಕೆ ಗುಂಪೆ ವಲಯದ ನೆರವು
0
ಆಗಸ್ಟ್ 26, 2022
Tags

.jpg)
