ಬದಿಯಡ್ಕ: ಕುಂಬ್ದಾಜೆ ಗ್ರಾಮ ಪಂಚಾಯತಿಯಲ್ಲಿ ವಾರ್ಷಿಕ ಯೋಜನೆಯ ಭಾಗವಾಗಿ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಶೌಚಾಲಯ ನಿರ್ಮಾಣ, ಮಹಿಳೆಯರಿಗೆ ಎಮ್ಮೆ ಕರು, ಹೈನುಗಾರರಿಗೆ ಹಾಲಿಗೆ ಸಹಾಯಧನ ಹಾಗೂ ಎಸ್ಸಿ/ಎಸ್ಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, 60 ವರ್ಷ ಮೇಲ್ಪಟ್ಟ ಎಸ್ಸಿ/ಎಸ್ಸಿ ಹಾಗೂ ಇತರ ವೃದ್ಧರಿಗೆ ಮಂಚ, ಎಸ್ಸಿ/ಎಸ್ಸಿ ಮಹಿಳೆಯರಿಗೆ ಸ್ವ ಉದ್ಯೋಗ, ಜೇನು ಕೃಷಿಗೆ ಕೂಲಿ ವೆಚ್ಚದ ಮೇಲೆ ಸಹಾಯಧನ, ಮಹಿಳೆಯರಿಗೆ ಆಹಾರ ಧಾನ್ಯಗಳ ಬೀಜ, ಅಡಿಕೆ ಬೆಳೆಗೆ ಸಾವಯವ ಗೊಬ್ಬರ, ಕರಿಮೆಣಸಿನ ಬಳ್ಳಿ ವಿತರಣೆಗೆ ಅರ್ಜಿಯನ್ನು ಸಲ್ಲಿಸಿಬಹುದು. ಅರ್ಜಿಗಳನ್ನು ವಾರ್ಡ್ ಸದಸ್ಯರಿಂದ ಅಥವಾ ಪಂಚಾಯತಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೆ.12ರೊಳಗೆ ಪಂಚಾಯತ್ ಕಚೇರಿಗೆ ತಲುಪಿಸಲು ತಿಳಿಸಲಾಗಿದೆ.
ಫಲಾನುಭವಿಗಳ ಆಯ್ಕೆಗೆ ಅರ್ಜಿ ಆಹ್ವಾನ
0
ಆಗಸ್ಟ್ 27, 2022

