ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆಯ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಜರಗುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸೆಪ್ಟಂಬರ್ 1ರಂದು ಸಂಜೆ 5.30ಕ್ಕೆ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ “ಶ್ರೀರಾಮ ದರ್ಶನ” ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀ ಮಾಧವ ಮಧೂರು ಭಾಗವಹಿಸಲಿದ್ದಾರೆ.
ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ತಾಳಮದ್ದಳೆ
0
ಆಗಸ್ಟ್ 27, 2022

