HEALTH TIPS

ವಿವಿಧ ಚಟುವಟಿಕೆಗಳತ್ತ ಸಕ್ರಿಯಗೊಳ್ಳಲಿರುವ ಕೇರಳ ತುಳು ಅಕಾಡೆಮಿ: ತುಳುನಾಡಿನ ಇತಿಹಾಸ ಅಧಿಕೃತವಾಗಿ ದಾಖಲಿಸುವ ವಿಶೇಷ ಹೊತ್ತಗೆ ರಚನೆ ಶೀಘ್ರ: ಅಧ್ಯಕ್ಷ ಕೆ.ಆರ್.ಜಯಾನಂದ


             ಮಂಜೇಶ್ವರ:  ತುಳು ಭಾμÉ ಮತ್ತು ಸಂಸ್ಕøತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿ ನೂತನ ಚಿಂತನೆಗಳನ್ನು ಸಿದ್ದಪಡಿಸುತ್ತಿದೆ. ಭಾμÁ ಅಲ್ಪಸಂಖ್ಯಾತ ತುಳು ಜನರ ಕಲಾ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನೂತನವಾಗಿ ಆಯ್ಕೆಯಾಗಿರುವ ಕೆ.ಆರ್.ಜಯಾನಂದ ಅವರನ್ನೊಳಗೊಂಡ ಸಮಿತಿ ತಿಳಿಸಿದೆ.
    ಕೋವಿಡ್ ಹರಡುವಿಕೆಯ ಪರಿಣಾಮ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕಾಡೆಮಿಯ ಚಟುವಟಿಕೆಗಳು ಈಗ ಸಕ್ರಿಯಗೊಳ್ಳಲಿವೆ ಎಂದು ತುಳು ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಆರ್.ಜಯಾನಂದ ತಿಳಿಸಿರುವರು. ತುಳುನಾಡಿನ ಇತಿಹಾಸ ಇದುವರೆಗೂ ಅಧಿಕೃತವಾಗಿ ದಾಖಲಾಗಿಲ್ಲ. ಕನ್ನಡ ಪ್ರದೇಶಕ್ಕೆ ಸಂಬಂಧಿಸಿದ ಇತಿಹಾಸವಿದ್ದರೂ ಬೇಕಲದವರೆಗೆ ಇರುವ ಹಳೆ ತುಳುನಾಡಿನ ಕುರಿತಾದ ದಾಖಲೆಗಳು ಇಲ್ಲ. ಈ ಎಲ್ಲಾ ಚರಿತ್ರೆಗಳನ್ನು ಒಳಗೊಂಡಿರುವ ಪ್ರತ್ಯೇಕ ವಿಶೇμÁಂಕವನ್ನು ತುಳು ಅಕಾಡೆಮಿ ಬಿಡುಗಡೆ ಮಾಡಲಿದೆ ಎಂದಿರುವರು.
            ಅಕಾಡೆಮಿಯ ಆರಂಭದ ದಿನಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಮತ್ತೊಮ್ಮೆ ನಡೆಸಲಾಗುವುದು. ತುಳುವಿನ ‘ರಾಷ್ಟ್ರೀಯ ಹಬ್ಬ’ ಇದರಲ್ಲಿ ಪ್ರಮುಖವಾದುದು. ರಾಷ್ಟ್ರಮಟ್ಟದಲ್ಲಿ ತುಳು ಭಾμÉ ಮತ್ತು ಸಂಸ್ಕೃತಿಗಾಗಿ ದುಡಿಯುವವರನ್ನು ಇದರ ಭಾಗವಾಗಿ ಪರಿಗಣಿಸಲಾಗುವುದು. ತುಳು ಭಾμÉ ಮತ್ತು ಸಂಸ್ಕೃತಿಯ ಬಗ್ಗೆ ಪ್ರಾಮಾಣಿಕವಾಗಿ ತಿಳಿದಿರುವ ತಜ್ಞರನ್ನು ಜೊತೆಗೂಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು. ತುಳು ಸಂಸ್ಕೃತಿ ಯಲ್ಲಿ ಪ್ರಮುಖವಾದ ತಿಂಗಳು, (ಆಟಿ) ಮಲಯಾಳ ತಿಂಗಳ "ಕರ್ಕಟಕ". ತುಳು ಜನರಿಗಾಗಿ ಈ ತಿಂಗಳಿನಲ್ಲಿ ಗ್ರಾಮೋತ್ಸವಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿರುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries