ಕಾಸರಗೋಡು: ಜಿಲ್ಲೆಯ ವಿವಿಧ ಶಕ್ತಿಕೇಂದ್ರಗಳಲ್ಲಿ ನವರಾತ್ರಿ ಮಹೋತ್ಸವ ಸೋಮವಾರ ಆರಂಭಗೊಂಡಿತು. ಕಾಸರಗೋಡು ನಗರದ ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಮಹಾದೇವಿ ದೇವಸ್ಥಾನದಲ್ಲಿ ಬೆಳಗ್ಗೆ ಭಂಡಾರದ ಮನೆಯಿಂದ ದೇವಸ್ಥಾನಕ್ಕೆ ಶ್ರೀದೇವರ ಭಂಡಾರ ಆಗಮಿಸುವುದರೊಂದಿಗೆ ಒಂಬತ್ತು ದಿವಸಗಳ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಶುದ್ಧಿಕಲಶಮ ಚಂಡಿಕಾ ಹೋಮ ನಡೆಯಿತು. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮ ಜರುಗಿತು.
ಕಾಸರಗೋಡು ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರೀ ಮಹಾಕಾಳಿ ಕಾಶಿ ಕಾಲ ಭೈರವೇಶ್ವರ ದೇವಸ್ಥಾನ, ಶ್ರೀ ಚಾಮುಮಡೇಶ್ವರೀ ಕಾಲಬೈರವೇಶ್ವರ ದೇವಸ್ಥಾನ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರ, ಕೂಡ್ಲು ರಾಮದಾಸನಗರ ಮೀಪುಗುರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರ, ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ಕ್ಷೇತ್ರ, ಕೊಲ್ಲಂಗಾನ ಶ್ರೀನಿಲಯ ಕ್ಷೇತ್ರ, ಪೊಳ್ಳಕಜೆ ಸನ್ನಿಧಿ, ಐಲ ಶ್ರೀಕ್ಷೇತ್ರ, ಶುಳುವಾಲಮೂಲೆ ಶ್ರೀಸದನ ಸನ್ನಿಧಿ, ಅಗಲ್ಪಾಡಿ ಸನ್ನಿಧಿ, ಆವಳ ಶ್ರೀಸನ್ನಿಧಿ ಸೇರಿದಂತೆ ವಿವಿಧೆಡೆ ನವರಾತ್ರಿ ಮಹೋತ್ಸವ ಆರಂಭಗೊಂಡಿತು.
ಫೋಟೋ : ಕಾಸರಗೋಡು ಕೊರಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ.

