HEALTH TIPS

ದುರ್ಗೆ ಆರಾಧನೆಯಿಂದ ಎಲ್ಲಾ ದುರಿತಗಳು ಪರಿಹಾರ : ಎಡನೀರು ಶ್ರೀ: ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವ ಉದ್ಘಾಟಿಸಿ ಅಭಿಮತ


                    ಕಾಸರಗೋಡು: ನವರಾತ್ರಿ ಉತ್ಸವದ ದಿನಗಳಲ್ಲಿ ದುರ್ಗೆಯನ್ನು ಒಂದೊಂದು ದಿನ ಒಂದೊಂದು ರೂಪದಲ್ಲಿ ಪೂಜಿಸಲಾಗುತ್ತಿದೆ. ಈ ಮೂಲಕ ದೇವಿಯ ಆರಾಧನೆಯಿಂದ ಎಲ್ಲಾ ದುರಿತಗಳು, ಸಮಸ್ಯೆಗಳು ಪರಿಹಾರವಾಗುತ್ತವೆ. ದಸರಾ ನಾಡ ಹಬ್ಬವನ್ನು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ಕಲೆಗಳ ಮೂಲಕವೂ ಆರಾಧಿಸುವ ಸಂಪ್ರದಾಯ ಬೆಳೆದು ಬಂದಿದ್ದು, ಮನಸ್ಸಿಗೆ ಶಾಂತಿ, ನೆಮ್ಮದಿಯನ್ನುಂಟು ಮಾಡುತ್ತದೆ ಎಂದು ಎಡನೀರು ಮಠಾಧೀಶ  ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.  
            ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕøತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಘಟಕ, ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವವನ್ನು ಸೋಮವಾರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.  
    ಉತ್ಸವಗಳು ಧಾರ್ಮಿಕ ಅರಿವಿನ ವಿಸ್ತರಣೆಗೆ ಸಹಕಾರಿಯಾಗುವುದರ ಜತೆಗೆ ಜನರನ್ನು ಸಾಂಸ್ಕøತಿಕವಾಗಿ ಸಂಪನ್ನಗೊಳಿಸುತ್ತದೆ. ಸಮಾಜದಲ್ಲಿ ಎಲ್ಲ ಸ್ತರದ ಜನತೆಯನ್ನು ಒಗ್ಗೂಡಿಸುವಲ್ಲಿ ದಸರಾನಾಡಹಬ್ಬ ಸಹಕಾರಿ ಎಂದು ಶ್ರೀಗಳು ತಿಳಿಸಿದರು.



      ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವದ ಮೆರವಣಿಗೆಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಈ ಸಂದಭ್ ಮಾತನಾಡಿದ ಅವರು, ಭೌಗೋಳಿಕವಾಗಿ  ಕೇರಳದಲ್ಲಿದ್ದರೂ, ಸಾಂಸ್ಕøತಿಕವಾಗಿ ಕಾಸರಗೋಡು ಇನ್ನೂ ಕರ್ನಾಟಕದ ಅಂಗವಾಗಿ ಉಳಿದುಕೊಂಡಿರುವುದಾಗಿ ತಿಳಿಸಿದರು.  ದೇಶದ ಹಬ್ಬ, ಉತ್ಸವಾದಿಗಳು ಜನರಲ್ಲಿ ಸಾಮರಸ್ಯವನ್ನು ಹೆಚ್ಚಿಸಲು ಕಾರಣವಾಗಿದೆ. ಎಲ್ಲರೂ ಜತೆಗೂಡಿ ಹಬ್ಬ ಆಚರಿಸುವಂತಾದಾಗ ಒಗ್ಗಟ್ಟುಬಲಗೊಳ್ಳಲು ಕಾರಣವಾಗುವುದಾಗಿ ತಿಳಿಸಿದರು.
      ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ ರಾವ್ ಬೇಕಲ್, ಸಂಧ್ಯಾರಾಣಿ ದಂಪತಿಗಳು ಎಡನೀರು ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಧಾರ್ಮಿಕ ಮುಖಂಡ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕರ್ನಾಟಕ ರಾಜ್ಯ ಪ್ರಶಿಕ್ಷಣ ಪ್ರಕೋಷ್ಠ ಸದಸ್ಯೆ ಡಾ.ಮಂಜುಳಾ ಅನಿಲ್ ರಾವ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ರಮೇಶ್ ಕುದ್ರೆಕ್ಕೋಡು ಕುಂಬಳೆ, ಬ್ರಹ್ಮಶ್ರೀ ವಾಸುದೇವ ತಂತ್ರಿ, ಸಂಗೀತ ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮ, ಕೆ.ವಿ.ಬಾಲಕೃಷ್ಣ, ಪ್ರೊ.ಎ.ಶ್ರೀನಾಥ್ ಕಾಸರಗೋಡು, ನ್ಯಾಯವಾದಿ ಥೋಮಸ್ ಡಿ ಸೋಜಾ, ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಅನಿಲ್ ರಾವ್ ಮಂಗಳೂರು, ಜನಾರ್ದನ, ದೇವಸ್ಥಾನದ ಪಾತ್ರಿ ಪ್ರವೀಣ್ ನಾಯಕ್, ಸಾಹಿತಿ ಉದಿನೂರು ಮೊಹಮ್ಮದ್ ಕುಂಞÂ, ರಾಜಕೀಯ ಮುಂದಾಳು ಟಿ.ಎ.ಮೂಸಾ, ಪೈವಳಿಕೆ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಜೆಡ್.ಎ.ಕಯ್ಯಾರ್, ಕಾಸರಗೋಡು ನಗರಸಭಾ ಮಾಜಿ ಸದಸ್ಯ ಮೊೈದೀನ್ ಮೊದಲಾದವರು ಉಪಸ್ಥಿತರಿದ್ದರು.                   ಸಂಕೀರ್ತನಾ ಸಾಮ್ರಾಟ್ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ದಸರಾ ಸಂಕೀರ್ತನಾ ದಶಾಹ ಉದ್ಘಾಟಿಸಿದರು.
            ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪತ್ರಕರ್ತ ಪ್ರದೀಪ್ ಬೇಕಲ್ ವಂದಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries