ಮಂಜೇಶ್ವರ: ಮಂಜೇಶ್ವರ ಮಂಡಲ ಬಿಜೆಪಿ ಸಮಿತಿ ವತಿಯಿಂದ ಭಾನುವಾರ ಮಿಂಜ ಚಂದು ಮಾಸ್ತರ್ ಅವರ ನಿವಾಸದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಯಂತಿ ನಡೆಯಿತು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ದೀನ್ ದಯಾಳ್ ಅವರ ಸಂಘಟನಾ ಸಿದ್ದಾಂತ, ಕಾರ್ಯಕರ್ತರು ರೂಢಿಸಿಕೊಳ್ಳಬೇಕಾದ ಅವರ ಸಂಘಟನಾ ತತ್ವವನ್ನು ವಿವರಿಸಿದರು. ಅವರ ಜೀವನ ಶೈಲಿಯೇ ಪಕ್ಷಕ್ಕೆ ಪ್ರೇರಣೆ ಎಂದು ಹೇಳಿದರು.
ಮುಖಂಡರಾದ ಅಶ್ವಿನಿ ಪಜ್ವ, ಶಂಕರನಾರಾಯಣ ಮುಂದಿಲ, ನಾರಾಯಣ ನಾಯ್ಕ್, ಅಶಲತಾ ಪೇಲಪ್ಪಾಡಿ, ಕೆ.ವಿ. ಭಟ್, ಶೇಖರ ಕೋಡಿ, ಚಂದು ಮಾಸ್ತರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರಧಾನಿ ಯವರ ಮನ್ ಕೀ ಭಾತ್ ಅಲಿಸಲಾಯಿತು.
ಪಂಡಿತ್ ದೀನ್ ದಯಾಳ್ ಜಯಂತಿ
0
ಸೆಪ್ಟೆಂಬರ್ 27, 2022

.jpg)
