HEALTH TIPS

ಮನೆಬಾಗಿಲಿಗೆ ಪಶುವೈದ್ಯಕೀಯ ಚಿಕಿತ್ಸೆ: ಸಂಚಾರಿ ಪಶು ಚಿಕಿತ್ಸಾ ಘಟಕಗಳಿಗೆ ಸಂಸದರಿಂದ ಚಾಲನೆ




            ಕಾಸರಗೋಡು: ಪಶುವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯನ್ನು ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಮೊಬೈಲ್ ಪಶುವೈದ್ಯಕೀಯ ಘಟಕಗಳು ಮತ್ತು ಕೇಂದ್ರೀಕೃತ ಕಾಲ್ ಸೆಂಟರ್‍ಗಳನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಿಲ್ಲೆಯಲ್ಲಿ ಕೇಂದ್ರೀಕೃತ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯನ್ವಯ ಮಂಜೂರಾದ 2 ಸಂಚಾರಿ ಪಶು ಚಿಕಿತ್ಸಾ ಘಟಕಗಳಿಗೆ ಸಂಸದ ರಾಜಮೋಹನ್ ಉಣ್ಣಿತ್ತಾನ್ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಬುಧವಾರ ಚಾಲನೆ ನೀಡಿದರು.  ಶಾಸಕ  ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು.  ಶಾಸಕರಾದಇ. ಚಂದ್ರಶೇಖರನ್, ಎ.ಕೆ.ಎಂ ಅಶ್ರಫ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರಚಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
           ಜಿಲ್ಲೆಯ ಕಾಞಂಗಾಡು ಮತ್ತು ಕಾಸರಗೋಡು ಬ್ಲಾಕ್‍ಗಳಲ್ಲಿ ಈ ಸೇವೆ ಈಗಾಗಲೇ ಲಭ್ಯವಾಗಲಿದೆ. ಕಾಞಂಗಾಡಿ ¥ನಗರಸಭೆಯ ಉದುಮ, ಪೆರಿಯ, ಪಳ್ಳಿಕೆರೆ, ಅಜನೂರ್ ಮತ್ತು ಮಡಿಕೈ, ಕಾಸರಗೋಡು ಬ್ಲಾಕಿನ ಚೆಮ್ನಾಡು, ಬದಿಯಡ್ಕ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‍ಗಳು ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲೂ ಈ ಸವಲತ್ತು ಸಿಗಲಿದೆ.
           ವಾಹನ ಸೇರಿದಂತೆ ಒಂದು ಸಂಚಾರಿ ಪಶು ಚಿಕಿತ್ಸಾಲಯಕ್ಕೆ 16 ಲಕ್ಷ ರೂ. ಖರ್ಚಾಗುತ್ತಿದೆ. ಘಟಕದಲ್ಲಿ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ, ಸಹಾಯಿ ಮತ್ತು ಚಾಲಕ ಯಾ ಅಟೆಂಡೆಂಟ್ ಹಾಜರಿರುತ್ತಾರೆ. ಸಣ್ಣ ಮತ್ತು ದೊಡ್ಡ ಶಸ್ತ್ರಚಿಕಿತ್ಸಾ ವಿಭಾಗ, ಕೃತಕ ಗರ್ಭಧಾರಣೆ, ಮಿನಿ ಪ್ರಯೋಗಾಲಯ, ಕೌ ಲಿಫ್ಟರ್, ಕಾಲ್ಫ್ ಪುಲ್ಲರ್ ಮತ್ತು ಅಗತ್ಯ ಔಷಧ ಸೌಲಭ್ಯಗಳನ್ನು ವಾಹನ ಒಳಗೊಂಡಿವೆ. ಇದರ ಸೇವೆಯು ಮಧ್ಯಾಹ್ನ 1 ರಿಂದ ರಾತ್ರಿ 8 ರವರೆಗೆ ಇರಲಿದ್ದು,  ಟೋಲ್ ಫ್ರೀ ಸಂಖ್ಯೆ 1962 ನಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ವ್ಯವಸ್ಥೆಯೂ ಜಾರಿಯಲ್ಲಿದೆ. ರೈತರು ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯ ಮೂಲಕ ಸಂಶಯ ನಿವಾರಣೆಯಿಂದ ತೊಡಗಿ ಚಿಕಿತ್ಸೆಯವರೆಗೆ ಸೇವೆಯನ್ನು ಪಡೆಯಬಹುದಾಗಿದೆ. ಜಿಲ್ಲಾ ಮೃಗ ಸಂರಕ್ಷಣಾಧಿಕಾರಿ ಡಾ.ಬಿ. ಸುರೇಶ್, ಉಪನಿರ್ದೇಶಕ ಡಾ.ಜಿ.ಎಂ. ಸುನಿಲ್, ಪಿ.ಆರ್.ಓ ಡಾ. ಎ. ಮುರಳೀಧರನ್, ಪಶು ರೋಗ ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಡಾ.ಎಸ್. ಮಂಜು, ಮುಖ್ಯ ಪಶುವೈದ್ಯಾಧಿಕಾರಿ ಡಾ.ಜಿ. ಜಯಪ್ರಕಾಶ್ ಮೊದಲಾದವರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries