ಕಾಸರಗೋಡು: ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭÀಗೊಂಡಿದ್ದು, ಇದರ ಪರಿಣಾಮವಾಗಿ ಉಷ್ಣತೆಯ ಮಟ್ಟ ಹೆಚ್ಚಾಗತೊಡಗಿದೆ. ಬಿಸಿಲ ಝಳ ಏರುವಂತೆ ಮಾಡಿದ್ದು, ಇದರಿಂದಾಗಿ ಬೆಳಗ್ಗೆ 11 ರಿಂದ ಅಪರಾಹ್ನ 3 ಗಂಟೆಯ ವರೆಗೆ ಬಿಸಿಲಿಗೆ ಮೈಯೊಡ್ಡದಂತೆ ರಾಜ್ಯ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ.
ತೀವ್ರ ಹೆಚ್ಚುತ್ತಿರುವ ಬಿಸಿಲ ಝಳ ದೇಹವನ್ನು ಸುಡುವಂತೆ ಮಾಡಲಿದೆ. ಜೊತೆಗೆ ಸುಟ್ಟ ಗಾಯಗಳೂ ಉಂಟಾಗಲಿದೆ. ಇಂತಹ ಸೂರ್ಯಾಘಾತ ಸಾಂಕ್ರಾಮಿಕ ರೋಗ ಹರಡಲು ದಾರಿ ಮಾಡಕೊಡಲಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸದಿದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಹಿರಿಯ ನಾಗರಿಕರು, ಮಕ್ಕಳು, ರೋಗಿಗಳು, ಗರ್ಭಿಣಿಯರು ಮತ್ತು ಬಿಸಿಲಲ್ಲಿ ದುಡಿಯುವವರು ಈ ವಿಷಯದಲ್ಲಿ ಅತೀ ಹೆಚ್ಚಿದ ಗಮನ ಹರಿಸಬೇಕೆಂದೂ ಆರೋಗ್ಯ ಇಲಾಖೆ ನೀಡಿದ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ. ಇಂತಹ ಸಮಯದಲ್ಲಿ ದಾಹ ಇಲ್ಲದಿದ್ದರೂ ಧಾರಾಳ ನೀರು ಕುಡಿಯಬೇಕು. ತಣ್ಣೀರನ್ನು ಕುಡಿಯುವವರು ಅದರ ಶುದ್ಧತೆಯ ಬಗ್ಗೆ ಗಮನ ಹರಿಸಬೇಕು. ಬಿಸಿಲಲ್ಲಿ ದುಡಿಯುವವರು ತಲೆಗೆ ಟೋಪಿ ಅಥವಾ ಕೊಡೆ ಉಪಯೋಗಿಸಬೇಕು. ತೆಳುವಾದ ಬಟ್ಟೆ ಧರಿಸಬೇಕು. ಮಕ್ಕಳನ್ನು ಬಿಸಿಲಲ್ಲಿ ಆಟವಾಡಲು ಬಿಡಬಾರದು. ಬಿಸಿಲಲ್ಲಿ ನಿಲುಗಡೆಗೊಳಿಸುವ ವಾಹನಗಳಲ್ಲಿ ಮಕ್ಕಳನ್ನು ಕುಳಿತುಕೊಳ್ಳಿಸಬಾರದು. ಮನೆಯ ಕಿಟಕಿ ಗಾಜುಗಳನ್ನು ಸದಾ ತೆಗೆದಿರಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಏರುತ್ತಿರುವ ಬಿಸಿಲ ಝಳ : ಬೆಳಗ್ಗೆ 11 ರಿಂದ 3 ರ ತನಕ ಬಿಸಿಲಿಗೆ ಮೈಯೊಡ್ಡದಂತೆ ಸೂಚನೆ
0
ಫೆಬ್ರವರಿ 27, 2023


