ಕಾಸರಗೋಡು : ಗಡಿಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 17 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕøತಿಗಾಗಿ ದುಡಿಯುತ್ತಿರುವ ಸಾಮಾಜಿಕ - ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 2022 - 23 ನೇ ವರ್ಷದ ರಂಗಚಿನ್ನಾರಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಪಿ.ಲಕ್ಷ್ಮೀನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ರಂಗ ಚಿನ್ನಾರಿ ಪ್ರಶಸ್ತಿಗೆ ಕಥೆಗಾರ, ಸಾಹಿತಿ ವಿಠಲ ಗಟ್ಟಿ ಉಳಿಯ ಮತ್ತು ಖ್ಯಾತ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯೂ ತಲಾ ಐದು ಸಾವಿರ ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಯುವ ಪ್ರತಿಭೆಗಳಿಗೆ ನೀಡುವ ರಂಗಚಿನ್ನಾರಿ ಯುವ ಪ್ರಶಸ್ತಿಗೆ ಜಾನಪದ ಕಲಾವಿದ ಸುಜಿತ್ ಕುಮಾರ್ ಹಾಗು ಸಂಗೀತ ಕಲಾವಿದೆ ಬಿ.ಮೇಧಾ ಕಾಮತ್ ಆಯ್ಕೆಯಾಗಿದ್ದಾರೆ. ರಂಗಚಿನ್ನಾರಿ ಯುವ ಪ್ರಶಸ್ತಿಯೂ ತಲಾ 2500 ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಪ್ರಶಸ್ತಿಯ ನಗದನ್ನು ದಿವಂಗತ ಹರಿರಾಯ ಕಾಮತ್ ಸ್ಮಾರಕವಾಗಿ ನೀಡಲಾಗುವುದು. ರಂಗಚಿನ್ನಾರಿ ಪ್ರಶಸ್ತಿ ನಗದನ್ನು ದಿ.ಎನ್.ಆರ್.ಬೇಕಲ್ ಸ್ಮರಣಾರ್ಥ ನೀಡಲಾಗುವುದು. ರಂಗಚಿನ್ನಾರಿ ಯುವ ಪ್ರಶಸ್ತಿ ನಗದನ್ನು ದಿ.ದೇರಪ್ಪ ಸ್ಮರಣಾರ್ಥ ನೀಡಲಾಗುವುದು.
ಪಿ.ಲಕ್ಷ್ಮೀನಾರಾಯಣ ಭಟ್ : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪು ಮನೆ(ಕೊಲ್ಯ)ದ ಪೂಕಲ ಲಕ್ಷ್ಮೀನಾರಾಯಣ ಭಟ್ ಅವರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪೂಕಳ ಕೃಷ್ಣ ಭಟ್ - ಶಂಕರಿ ಅಮ್ಮ ದಂಪತಿಗಳ ಪುತ್ರರಾಗಿರುವ ಲಕ್ಷ್ಮೀನಾರಾಯಣ ಭಟ್ 1951 ನವಂಬರ್ 12 ರಂದು ಜನಿಸಿದರು. ಅಜ್ಜ ಪೂಕಳ ವೆಂಕಟರಮಣ ಭÀಟ್ ಉತ್ತಮ ಅರ್ಥಧಾರಿ, ದೊಡ್ಡಪ್ಪ ಪೂಕಳ ವೆಂಕಟರಮಣ ಭಟ್ ಉತ್ತಮ ಅರ್ಥಧಾರಿಯೂ, ವೇµಧಾರಿಯೂ ಆಗಿದ್ದರು. ಸಹೋದರ ಪಿ.ಎನ್.ಕೃಷ್ಣ ಭಟ್, ಅಜ್ಜ ಎಡಕ್ಕಾನ ಕೇಶವ ಭಟ್ ಖ್ಯಾತ ಅರ್ಥಧಾರಿಯಾಗಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀನಾರಾಯಣ ಭಟ್ ಅವರು ದಿ.ಉಪ್ಪಳ ಕೃಷ್ಣ ಮಾಸ್ತರ್ ಅವರಲ್ಲಿ ನೃತ್ಯ ಅಭ್ಯಾಸ ಮಾಡಿದರು. ಅಜ್ಜ ದಿ.ಎಡಕ್ಕಾನ ಕೇಶವ ಭಟ್ ಅವರಲ್ಲಿ ಅರ್ಥಗಾರಿಕೆ ಕಲಿತರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ಮೇಳ, ಪುತ್ತೂರು, ಕರ್ನಾಟಕ, ಕುಂಡಾಪು, ಸುರತ್ಕಲ್, ಕಟೀಲು ಮತ್ತು ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿದರು. ಸುಮಾರು 35 ವರ್ಷಗಳ ಕಾಲ ಸ್ತ್ರೀ ಪಾತ್ರವನ್ನು ಬಿಟ್ಟು ಸಾಮಾನ್ಯವಾಗಿ ಉಳಿದೆಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ನಳ ಚಕ್ರವರ್ತಿ, ಹರಿಶ್ಚಂದ್ರ, ವಿಶ್ವಾಮಿತ್ರ, ಈಶ್ವರ, ಕರ್ಣ, ಕೌರವ, ದಶರಥ, ವಿಯೋಗದ ರಾಮ, ಲಕ್ಷ್ಮಣ, ಅರುಣಾಸುರ, ಯಯಾತಿ, ಕಂಸ, ಬಲಿ, ತುಘಲಕ್, ಉಗ್ರಸೇನ, ಬಪ್ಪ ಬ್ಯಾರಿ, ಕೋಟಿ, ಪೆರುಮಳು, ಕಾಂತಬಾರೆ, ಸಾಂದೀಪನಿ ಇತ್ಯಾದಿ ಪಾತ್ರಗಳು ಹೆಸರು ತಂದುಕೊಟ್ಟಿತು. ದಿ.ಮಲ್ಪೆ ವಾಸುದೇವ ಸಾಮಗರ ಸಂ.ಯ.ಮಂ. ತಂಡದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸಹಿತ ತಾಳ ಮದ್ದಳೆ ಕ್ಷೇತ್ರದಲ್ಲಿ ದೀರ್ಘ ಅನುಭವಿಯಾಗಿದ್ದಾರೆ. ಶೇಣಿ ಪ್ರಶಸ್ತಿ, ಎಡನೀರು ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರಿಂದ ಸಮ್ಮಾನ, ಮುಂಬಯಿಯಲ್ಲಿ, ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ಸಹಿತ ಅನೇಕ ಕಡೆಗಳಲ್ಲಿ ಸಮ್ಮಾನಿತರಾಗಿದ್ದಾರೆ.
ಸಾಹಿತಿ ವಿಠಲ ಗಟ್ಟಿ ಉಳಿಯ : ಮಧೂರು ಗ್ರಾಮದ ಉಳಿಯದಲ್ಲಿ ವಿಠಲ ಗಟ್ಟಿ ಉಳಿಯ 1956 ಜೂನ್ 15 ರಂದು ಕಿಳಿಂಗಾರ್ ಕುಂಞಪ್ಪ-ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದರು. ಖ್ಯಾತ ಸಣ್ಣ ಕತೆಗಾರರಾಗಿದ್ದ ಎಂ.ವ್ಯಾಸ ಅವರ ಏಕ ಮಾತ್ರ ಶಿಷ್ಯರಾಗಿರುವ ವಿಠಲ ಗಟ್ಟಿ ಉಳಿಯ ಅವರು 1979 ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದರು. ಈ ವರೆಗೆ ಅವರ 268 ಸಣ್ಣ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 23 ಕಾದಂಬರಿಗಳು ಧಾರಾವಾಹಿಗಳಾಗಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 38 ಕೃತಿಗಳು ಬೆಳಕು ಕಂಡಿದೆ. ಗಟ್ಟಿಯ ಕಪ್ಪೆ ಚಿಪ್ಪು, ಉತ್ಸವ, ಕತೆಯೇ ಬೇರೆ, ಸಾವಿರ ಕತೆಗಳ ಹುಡುಗಿ(ಕಥಾ ಸಂಕಲನಗಳು), ಕನ್ನಡ ಕಾವ್ಯೋತ್ಸವ(ಸಂಪಾದಿತ ಕವನ), ಬೇಲಿ ಪ್ರಶಸ್ತಿ ವಿಜೇತ ನಾಟಕ ಮೊದಲಾದ ಖ್ಯಾತ ಕೃತಿಗಳೊಂದಿಗೆ ಕಥೆ, ಕಾದಂಬರಿ, ಕಾವ್ಯಗಳನ್ನು ರಚಿಸಿದ್ದಾರೆ. ಬದುಕಿನ ಉದ್ದಕ್ಕೂ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಸೇವೆಗೈದು ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿರುವ ವಿಟಲ ಗಟ್ಟಿ ಅವರು ಎಂದೂ ತನ್ನ ಕೃತಿಗಳ ಬಗ್ಗೆ ತಾನೇ ಹೇಳಿಕೊಂಡವರಲ್ಲ. ನನ್ನ ಬಗ್ಗೆ ನನ್ನ ಕೃತಿಗಳೇ ಹೇಳಲಿ ಎನ್ನುವ ನಿಲುವು ಅವರದ್ದು. ಕಾಸರಗೋಡು ಮತ್ತು ಕರ್ನಾಟಕದ ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದಿರುವ ಅವರು ಪತ್ರಿಕೋದ್ಯಮದಲ್ಲೂ ಆರೇಳು ವರ್ಷ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮಲ್ಲದ ವಸಂತ ಪೂಜೆ ತುಳು ಭಕ್ತಿಗೀತೆ ಅವರ ಅತ್ಯಂತ ಜನಪ್ರಿಯ ಧ್ವನಿ ಸುರುಳಿ. ಇಪ್ಪತ್ತೈದು ವರ್ಷಗಳ ಕಾಲ ಚಲನಚಿತ್ರ ಚಾಲಕರಾಗಿದ್ದರು. ಖಾಸಗಿಯಾಗಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ವಿಠಲ ಗಟ್ಟಿ ಉಳಿಯ ಅವರು ಹಾಯ್ ಬೆಂಗಳೂರು, ಓ ಮನಸೆ, ಕರ್ಮವೀರ, ಚಂದನ, ಪ್ರಜಾರಂಗ ಮೊದಲಾದ ಪತ್ರಿಕೆಗಳಲ್ಲಿ ದುಡಿದಿದ್ದಾರೆ.
ಶ್ರೀಮತಿ ಕೆ.ಜಯಲಕ್ಷ್ಮಿ ಕಾರಂತ : ಕಸೂತಿ, ಹೊಲಿಗೆ, ತಾಳಮದ್ದಳೆ, ಬರವಣಿಗೆ, ಕಾವ್ಯ ವಾಚನ-ವ್ಯಾಖ್ಯಾನ, `Áರ್ಮಿಕ `Áಷಣ, ಯೋಗ ತರಬೇತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಶ್ರೀಮತಿ ಕೆ.ಜಯಲಕ್ಷ್ಮಿ ಕಾರಂತ ಅವರು ಖ್ಯಾತ ವಾಗ್ಮಿಗಳಲ್ಲೊಬ್ಬರು. 1956 ಮೇ 4 ರಂದು ಅಧ್ಯಾಪಕ ಕೆ.ನಾರಾಯಣ ಹೊಳ್ಳ-ಕೆ.ಶಾರದಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಜಯಲಕ್ಷ್ಮಿ ಕಾರಂತ ಅವರು ಕೆ.ರಾಮ ಕಾರಂತರ ಪತ್ನಿ. ಪಣಂಬೂರು ಎನ್.ಎಂ.ಪಿ.ಟಿ. ಹೈಸ್ಕೂಲ್ನ ನಿವೃತ್ತ ಕನ್ನಡ ಅಧ್ಯಾಪಕಿಯಾಗಿರುವ ಅವರು ಗಮಕ ವ್ಯಾಖ್ಯಾನಕಾರರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಗಮಕ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ದಶಾವತಾರ ಸಾರ(ಮಕ್ಕಳಿಗಾಗಿ ಪ್ರಶ್ನೋತ್ತರ ಮಾಲಿಕೆ), ಶ್ರೀ ದೇವಿ ಮಹಾತ್ಮೆ (ಕಾಫಿ ಟೇಬಲ್ ಬುಕ್) ಪ್ರಕಟಿತ ಕೃತಿಗಳು. ವಿಜಯ ಕರ್ನಾಟಕ ಮತ್ತು ಕಥಾ ಕೀರ್ತನ ಮಾಸ ಪತ್ರಿಕೆಯ ಅಂಕಣಗಾರ್ತಿಯಾಗಿದ್ದಾರೆ. ಡಿ.ಎಸ್.ಇ.ಆರ್.ಟಿ. ಯವರು ನಡೆಸಿದ ಡಾ.ಸರ್ವಪಳ್ಳಿ ರಾಧಾಕೃಷ್ಣನ್ರವರ ಜೀವನ ಚರಿತ್ರೆಯ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ, ಎನ್.ಸಿ.ಇ.ಆರ್.ಟಿ.ಯವರ ಸಂಶೋಧÀನಾತ್ಮಕ ಪ್ರಬಂಧ ಸ್ಪರ್ಧೆಯಲ್ಲಿ ಸಾಹಿತ್ಯ ಸಂಘ ಮೂಲಕ ಕನ್ನಡ ಭಾಷಾ ಬೆಳವಣಿಗೆ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. 2006 ಮತ್ತು 2014 ರಲ್ಲಿ ಸುರತ್ಕಲ್ನಲ್ಲಿ ಜರಗಿದ ಗಮಕ ಕಲಾ ಸಮ್ಮೇಳನದಲ್ಲಿ ಅಭಿನಂದನೆ ಹಾಗು ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಮಹಿಳಾ ಯಕ್ಷಗಾನದ ತಾಳಮದ್ದಳೆ ಕೂಟದಲ್ಲಿ 2 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ತಂಡದಲ್ಲಿ ಭಾಗವಹಿಸಿದ್ದಾರೆ. ಜೇಸೀಸ್, ರೋಟರಿ ಸಂಸ್ಥೆಗಳಿಂದ ಸನ್ಮಾನ ಪಡೆದಿದ್ದಾರೆ. ಶ್ರವಣ ನ್ಯೂನತೆಯುಳ್ಳ ಮಕ್ಕಳ ಪೆÇೀಷಕರ ಸಂಘದಲ್ಲಿ ಗೌರವ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹಾ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳಿಂದಲೇ ಯಕ್ಷಗಾನ ಪ್ರದರ್ಶನ ನೀಡಿ ಸುಮಾರು ಐದು ಲಕ್ಷ ರೂ. ನಿ„ ಸಂಚಯನ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಜಿತ್ ಕುಮಾರ್ : ಶ್ರೀಮತಿ ಗೀತಾ ಪುಳಿಕುತ್ತಿ ಮತ್ತು ದಿ.ಮೋನಪ್ಪ ಅವರ ದ್ವಿತೀಯ ಪುತ್ರ ಸುಜಿತ್ ಕುಮಾರ್ 1992 ಮಾರ್ಚ್ 22 ರಂದು ಪುಳಿಕುತ್ತಿಯಲ್ಲಿ ಜನಿಸಿದರು. ಕುಬಣೂರು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಬಳಿಕ ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪದವಿಪೂರ್ವ ಶಿಕ್ಷಣ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಬಿ.ಎ. ಕನ್ನಡ ಪದವಿ, ಕಣ್ಣೂರು ವಿಶ್ವ ವಿದ್ಯಾಲಯದ ಚಾಲ ಕಾಸರಗೋಡು ಕ್ಯಾಂಪಸಿನ ಅಧ್ಯಾಪಕ ತರಬೇತಿ ಕೇಂದ್ರದಿಂದ ಬಿ.ಎಡ್. ಪದವಿಯನ್ನು ಪಡೆದು 2015-16 ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ತೃತೀಯ ರ್ಯಾಂಕ್ನೊಂದಿಗೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. 2022 ರಲ್ಲಿ ಎಂ.ಫಿಲ್ ಕನ್ನಡ ಪದವಿಯನ್ನು ಅತ್ಯುನ್ನತ ಅಂಕದೊಂದಿಗೆ ಪಡೆದರು. ಕಾಲೇಜು ಜೀವನದಲ್ಲೇ ಅಭಿನಯ, ಬರವಣಿಗೆ, ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡು ಹಲವಾರು ಬಹುಮಾನಗಳನ್ನು ಪಡೆದರು. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಸರ್ವೋದಯ ಶಾಲೆ ಶುಭಾಸ್ನಗರ, ಸರಕಾರಿ ಶಾಲೆ ಬೇಕೂರು, ಸರಕಾರಿ ತಾಂತ್ರಿಕ ಶಾಲೆ ಮೊಗ್ರಾಲ್ ಪುತ್ತೂರು, ಕೊಡ್ಲಮೊಗರು ಮೊದಲಾದ ಶಾಲೆಗಳಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ 150 ಕ್ಕೂ ಅಧಿಕ ಲೇಖನ, ಕತೆ, ಕವಿತೆಗಳನು ಪ್ರಕಟಗೊಂಡಿದೆ. ಕೊರಗ ತನಿಯ ದೈವದ ಚಾಕರಿ ಸೇವೆಯನ್ನು ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ದುಡಿಯುತ್ತಿದ್ದು, ಈಗಾಗಲೇ ಹಲವಾರು ಪ್ರಶಸ್ತಿ, ಸಮ್ಮಾನ, ಅಭಿನಂದನೆಗೆ ಪಾತ್ರರಾಗಿದ್ದಾರೆ.
ಬಿ.ಮೇಧಾ ಕಾಮತ್ : ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನೊತ್ತಿರುವ ಬಿ.ಮೇಧಾ ಕಾಮತ್ ಭರವಸೆಯ ಯುವ ಪ್ರತಿಭೆ. ಶ್ರೀಪತಿ ಮತ್ತು ಗೀತಾ ಶ್ರೀಪತಿ ದಂಪತಿಗಳ ಪುತ್ರಿಯಾದ ಬಿ.ಮೇಧಾ ಕಾಮತ್ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ. 2019 ರಲ್ಲಿ ಸಿಬಿಎಸ್ಇ ಸಹೋದಯ ಸಾಂಸ್ಕøತಿಕ ಉತ್ಸವದ ಉತ್ತರ ಕೇರಳ ವಲಯದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2021 ರಲ್ಲಿ ಚಿನ್ಮಯ ಇಂಟರ್ ನ್ಯಾಶನಲ್ ಪೌಂಢೇಶನ್ ನಡೆಸಿದ ಸ್ಪರ್ಧೆಯ ಕನಕ`Áರ ಸ್ತ್ರೋತ್ರಂನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 2021 ರಲ್ಲಿ ರಾಷ್ಟ್ರೀಯ ಮಟ್ಟದ ಬಾಲಪ್ರತಿಭಾ ಉತ್ಸವದ ಭಜನ್ ಸ್ಪಧೆರ್Éಯಲ್ಲಿ ಪ್ರಥಮ ಸ್ಥಾನ, 2022 ರಲ್ಲಿ ಕಲಾ ವೈಭವಂ ಇಂಟರ್ ಸ್ಕೂಲ್ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2022-23 ರ ಚಿನ್ಮಯ ಫೆಸ್ಟ್ ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ಪ್ರಥಮ, ಸುಗುಮ ಸಂಗೀತ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ, ಭಕ್ತಿಗೀತೆಯಲ್ಲಿ ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಗ್ರೂಪ್ ಸಾಂಗ್ನಲ್ಲಿ ಪ್ರಥಮ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಮಲಯಾಳ ಮನೋರಮ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ ಅಟ್ಟಂಪಾಟು ಕಾರ್ಯಕ್ರಮದ ಸುಗುಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೀರ್ತಿಗೆ ಪಾತ್ರರಾಗಿದ್ದಾರೆ.
ಮೇ 20 ರಂದು ಸಂಜೆ 5 ಗಂಟೆಗೆ ಎಡನೀರು ಮಠದಲ್ಲಿ ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.


