ಮಂಜೇಶ್ವರ: ವಿಶ್ವ ಹಿಂದು ಪರಿಷತ್ ಮಾತೃ ಮಂಡಳಿ ಮೀಯಪದವು ವತಿಯಿಂದ ಇಪ್ಪತ್ತ ನಾಲ್ಕನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ನಾಳೆ(ಆ. 25) ಮಧ್ಯಾಹ್ನ 2.30ಕ್ಕೆ ಮೀಯಪದವಿನ ಶ್ರೀ ಅಯ್ಯಪ್ಪ ಮಂದಿರಲ್ಲಿ ವೇದಮೂರ್ತಿ ಬೋಳಂತಕೋಡಿ ಶ್ರೀರಾಮ ಭಟ್ ರವರ ನೇತೃತ್ವದಲ್ಲಿ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಪೆರಡಾಲದಲ್ಲಿ ಶ್ರೀವರಮಹಾಲಕ್ಷ್ಮೀ ಪೂಜೆ:
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಾಳೆ(ಆ. 25) ಬೆಳಗ್ಗೆ 10ಕ್ಕೆ ಜರುಗಲಿದೆ. ಅಂದು ಬೆಳಗ್ಗೆ 7.45ಕ್ಕೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ಗಂಟೆಗೆ ಶ್ರೀ ವರಮಹಾಲಕ್ಷ್ಮೀ ಪೂಜಾ ಮಂಗಳಾರತಿ ನಡೆಯುವುದು.

.jpeg)
