ಪೆರ್ಲ : ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಪೆರ್ಲ ಘಟಕ ವತಿಯಿಂದ ಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಕಾರ್ಯಕ್ರಮ ಆ. 31ರಂದು ಬೆಳಗ್ಗೆ 10ಕ್ಕೆ ಪೆರ್ಲ ಪಡ್ರೆ ಸಭಾ ಭವನದಲ್ಲಿ ಜರುಗಲಿರುವುದು. ಸಮಾರಂಭದಲ್ಲಿ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಗುವುದು.
ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಬಾಡೂರು ದಿಕ್ಸೂಚಿ ಭಾಷಣ ಮಾಡುವರು. ನಿವೃತ್ತ ಪ್ರಾಂಶುಪಾಲ ಸುನೀತ್ ಕುಮಾರ್ ಡಿ., ನಿವೃತ್ತ ಅಧ್ಯಾಪಕ ಶಿವಪ್ಪ ಪೂಜಾರಿ, ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ನರಸಿಂಹ ಪೂಜಾರಿ, ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚನಿಯಪ್ಪ ಪೂಜಾರಿ ಅಲಾರು, ಶ್ರೀ ನಾರಾಯಣ ಗುರು ಮಹಿಳಾ ಸಂಘದ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ , ಪ್ರಾದೇಶಿಕ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿರುವರು. ಈ ಸಂದರ್ಭ ಕೇರಳ ಸರ್ಕಾರದ ಸೇವಾ ಪದಕ ಪುರಸ್ಕøತ ಬದಿಯಡ್ಕ ಸಿವಿಲ್ ಎಕ್ಸಯಿಸ್ ಆಫೀಸರ್ ಮೋಹನ ಕುಮಾರ್ ಬೆದ್ರಂಪಳ್ಳ ಅವರನ್ನು ಸನ್ಮಾನಿಸಲಾಗುವುದು. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್ ನಡುಬೈಲು ಇವರನ್ನು ಅಭಿನಂದಿಸಲಾಗುವುದು. ಕಳೆದ ಸಾಲಿನ ಎಸ್ಸೆಸೆಲ್ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

