ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಕಾಸರಗೋಡಿನ ಮಹಿಳಾ ಘಟಕ ನಾರಿಚಿನ್ನಾರಿಯ ಎಂಟನೇ ಸರಣಿ ಕಾರ್ಯಕ್ರಮ 'ಓಣಂ ಸಂಧ್ಯಾ'ಆ. 26ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಕೇಂದ್ರೀಯ ವಿಶ್ವ ವಿದ್ಯಾಲಯ ಸಮಾಜಸೇವಾ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ. ಲಕ್ಷ್ಮೀ ಸಮಾರಂಭ ಉದ್ಘಾಟಿಸುವರು. ನಾರಿಚಿನ್ನಾರಿ ಗೌರವಾಧ್ಯಕ್ಷೆ ತಾರಾ ಜಗದೀಶ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ಸಾಹಿತಿ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ನಾಟ್ಯಗುರು, ವಿದುಷಿ ಶಶಿಕಲಾ ಟೀಚರ್ ಅವರಿಗೆ ಗೌರವಾರ್ಪಣೆ ನಡೆಯುವುದು. ಡಾ. ಕಾತ್ಯಾಯಿನಿ ಕುಇಂಜಿಬೆಟ್ಟು ಅವರು ಬರೆದ ಐದು ಪುಸ್ತಕ ಏಕತಾರಿ ಸಂಚಾರಿ, ರಾಮಧಾನ್ಯ ಚರಿತೆ, ಶಿವರಾಮ ಕಾರಂತದ ಕನ್ನಡ ಪ್ರಜ್ಞೆ, ಕೊಕ್ಕೊ ಕೋಕೋ ಹಾಗೂ ವಾಚಿಕೆ ಕೃತಿಗಳ ಬಿಡುಗಡೆ ನಡೆಯುವುದು. ಕಾಸರಗೋಡು ಸರ್ಕಾರಿ ಕಾಲೇಜು ಸಹಾಯಕ ಪರಾಧ್ಯಾಪಕಿ ಲಕ್ಷ್ಮೀ ಕೆ. ಕೃತಿಪರಿಚಯ ನೀಡುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ತಿರುವಾದಿರ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಓಣಂ ಹಾಡು, ಭಾವಗೀತೆ, ಹವ್ಯಕ ಗೀತೆ, ದೇಶಬಕ್ತಿಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ ನಡೆಯುವುದು.


