ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ 'ಸ್ಪೋಕನ್ ಇಂಗ್ಲಿಷ್' ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು. ಶಾಲೆಯ ಸೀನಿಯರ್ ಅಸಿಸ್ಟೆಂಟ್ ದಿವ್ಯಗಂಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ತರಗತಿಗಳನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಂಗ್ಲ ಭಾಷೆಯ ಕಲಿಕೆ ಪ್ರಪಂಚದ ಜ್ಞಾನದ ಕೀಲಿಕೈ ಇದ್ದಂತೆ, ಪ್ರತಿದಿನದ ಅಭ್ಯಾಸದಿಂದ ಇಂಗ್ಲಿಷ್ನಲ್ಲಿ ನಿರ್ಗಳವಾಗಿ ಮಾತನಾಡುವುದನ್ನು ಕಲಿಯಲು ಸಾಧ್ಯ. ಸದಾಶಿವ ಶರ್ಮ ಹಾಗೂ ದಾಸಪ್ಪ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎಸ್.ಆರ್. ಜಿ ಕನ್ವೀನರ್ ನಜುಮ್ಮುನ್ನಿಸಾ ಟೀಚರ್, ಚಿತ್ರಕಲಾ ಅಧ್ಯಾಪಕ ಸತೀಶ್ ಮಾಸ್ಟರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪರವಾಗಿ ಚಿನ್ಮಯಕೃಷ್ಣ ಎಂ ಅಭಿಪ್ರಾಯ ಮಂಡಿಸಿದನು. ಶಾಲೆಯ ಶಿಕ್ಷಕರಾದ ರಂಜಿತ್ ಮಾಸ್ಟರ್ ಸ್ವಾಗತಿಸಿದರು. ಶಿತಾ ಟೀಚರ್ ವಂದಿಸಿದರು.


