ಸಮರಸ ಚಿತ್ರಸುದ್ದಿ: ಕಾಸರಗೋಡು: ಆಲಂಪಾಡಿ ವೆಂಕಟೇಶ ಶಾನುಭಾಗ್ ಟ್ರಸ್ಟ್, ಕಾಸರಗೋಡು ಇದರ ವತಿಯಿಂದ ಖ್ಯಾತ ಮೃದಂಗ ವಿದ್ವಾನ್, ಶತಾಯುಷಿ ಬಾಬು ರೈ ಅವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು. ಟ್ರಸ್ಟ್ ಪದಾಧಿಕಾರಿಗಳಾದ ಡಾ. ಶಂಕರ್ ರಾಜ್, ಸುಕುಮಾರ ಆಲಂಪಾಡಿ, ವಿದುಷಿ ರಾಧಾಮುರಳೀಧರ, ನಯನಾ ರಾಜ್ ವಿದ್ವಾನ್ ಸದಾಶಿವ ಆಚಾರ್, ಬಾಬು ರೈ ಅವರ ಮಕ್ಕಳಾದ ಶ್ರೀ ಶ್ರೀಧರ್ ರೈ, ಶ್ರೀ ನಾರಾಯಣ ರೈ ಮತ್ತು ಮನೆಯವರು ಉಪಸ್ಥಿತರಿದ್ದರು.


