HEALTH TIPS

ಅಯೋಧ್ಯಾ: ಸ್ನೋ ಪಾರ್ಕ್, ಟೆಂಟ್‌ ಸಿಟಿ ನಿರ್ಮಾಣ

                ವದೆಹಲಿ: ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿರುವ ರಾಮ ಮಂದಿರದಿಂದಾಗಿ ದೇಶದ ಗಮನ ಸೆಳೆಯುತ್ತಿರುವ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಸ್ನೋಪಾರ್ಕ್‌, ಟೆಂಟ್‌ ಸಿಟಿ, ಕ್ರೂಸ್‌ ಸೇವೆ ಹಾಗೂ ಕಲ್ಚರಲ್‌ ಝೋನ್‌ನಂತಹ ಸೌಲಭ್ಯಗಳು ತಲೆ ಎತ್ತಲಿದ್ದು, ನಗರಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

               'ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಬರುವ ಜನರು ಇಲ್ಲಿನ ವೈವಿಧ್ಯಮಯ ಈ ತಾಣಗಳಿಗೂ ಭೇಟಿ ನೀಡಲಿ ಎಂಬ ಉದ್ದೇಶವಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

              'ನಗರದಲ್ಲಿ ಹಲವಾರು ತಾಣಗಳ ಅಭಿವೃದ್ಧಿಗೆ ಯೋಜಿಸಲಾಗಿದೆ. ಹಲವು ಪ್ರಸ್ತಾವಗಳು ಸಲ್ಲಿಕೆಯಾಗಿದ್ದು, ಆದಷ್ಟು ಶೀಘ್ರ ಅನುಮೋದನೆ ನೀಡಲು ಪ್ರಯತ್ನಿಸುತ್ತಿದ್ದೇವೆ' ಎಂದು ಜಿಲ್ಲಾಧಿಕಾರಿ ನಿತೀಶ್‌ ಕುಮಾರ್‌ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

                 ಅಹಮದಾಬಾದ್‌ ಮೂಲದ ಪ್ರವೇಗ್ ಕಮ್ಯುನಿಕೇಷನ್ಸ್ (ಇಂಡಿಯಾ) ಲಿಮಿಟೆಡ್‌ ಹಾಗೂ ಲಲ್ಲುಜಿ ಅಂಡ್‌ ಸನ್ಸ್‌ ಕಂಪನಿಗಳು ಸರಯೂ ನದಿ ತೀರದಲ್ಲಿ ಟೆಂಟ್‌ ಸಿಟಿ ನಿರ್ಮಿಸುವ ಸಂಬಂಧ ಪ್ರಸ್ತಾವ ಸಲ್ಲಿಸಿವೆ ಎಂದು ತಿಳಿಸಿದ್ದಾರೆ.

                 ಸ್ನೋ ಪಾರ್ಕ್ ನಿರ್ಮಾಣ ಹಾಗೂ ಇತರ ಐಷಾರಾಮಿ ಹಡಗುಗಳ ಸೇವೆಗಳನ್ನು ಒದಗಿಸುವ ಸಂಬಂಧ ನವದೆಹಲಿ ಮೂಲದ ಅಯೋಧ್ಯಾ ಕ್ರೂಸ್‌ ಲೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಸ್ತಾವ ಸಲ್ಲಿಸಿದೆ.

'ಈ ಡಿಸೆಂಬರ್‌ನಲ್ಲಿ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಸರಯೂ ನದಿಯಲ್ಲಿ ಕ್ರೂಸ್‌ ಸೇವೆ ಆರಂಭಿಸಲಾಗುವುದು' ಎಂದು ಸಂಸ್ಥೆಯ ಗ್ಲೋಬಲ್ ಬ್ಯುಸಿನೆಸ್‌ ಮುಖ್ಯಸ್ಥ ಮನೋಜ್‌ ಅರೋರಾ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries