ಪೆರ್ಲ : ಜನತೆಗೆ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಗಾಂಧೀ ಜಯಂತಿ ಪ್ರಯುಕ್ತ 'ಸ್ವಚ್ಛತಾ ಹೀ ಸೇವಾ" ಎಂಬ ಜನಜಾಗೃತಿ ಸಂದೇಶ ಮೆರವಣಿಗೆ ಪೆರ್ಲ ಪೇಟೆಯಲ್ಲಿ ನಡೆಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ.ಸದಸ್ಯ ನಾರಾಯಣ ನಾಯ್ಕ, ನಲಂದಾ ಕಾಲೇಜಿನ ಪ್ರಾಂಶುಪಾಲ ಶಂಕರ ಕುಲಾಲ್ ಖಂಡಿಗೆ, ಯೋಜನಾ ಸಮಿತಿ ಉಪಾಧ್ಯಕ್ಷೆ ಆಯಿμÁ ಎ.ಎ, ಆರೋಗ್ಯ ಇಲಾಖೆಯ ಸಜಿತ್, ಪ್ರೇರಕರಾದ ಪರಮೇಶ್ವರ, ಅನಂದ ಕುಕ್ಕಿಲ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಭಿಯಂತರ ನವಾಸ್ ಮತ್ರ್ಯ, ಆಫೀದ್ ಉಪಸ್ಥಿತರಿದ್ದರು.
ಪಂ.ಕಾರ್ಯದರ್ಶಿ ಹಂಸಾ ಸ್ವಚ್ಛಾ ಪರಿಸರ ಸಂರಕ್ಷಣೆ ಪ್ರತಿಜ್ಞೆಯನ್ನು ಬೋಧಿಸಿದರು. ಎನ್ನೆಸ್ಸಸ್ಸ್, ಹಸಿರು ಕ್ರಿಯಾಸೇನೆ, ಆಶಾ ಕಾರ್ಯಕರ್ತೆಯರು ಹಾಗೂ ಉದ್ಯೋಗ ಖಾತರಿ ಯೋಜನೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpg)
.jpg)
