ಕಾಸರಗೋಡು: ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಯುವಜನ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೇರಳೋತ್ಸವದ ಅಂಗವಾಗಿ ಬಾಸ್ಕೆಟ್ ಬಾಲ್ ಸ್ಪರ್ಧೆಯನ್ನು ಆಯೋಜಿಸಿತು.
ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಹಣಕಾಸು ಅಧಿಕಾರಿ ಎಸ್.ಸಲೀಂ, ಜಿಲ್ಲಾ ಯುವ ಕಲ್ಯಾಣ ಮಂಡಳಿ ಅಧಿಕಾರಿ ಶಿಲಾಸ್, ಜಿಲ್ಲಾ ಪಂಚಾಯಿತಿ ಜೆ.ಎಸ್. ರಂಜಿನಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಪರಿವೀಕ್ಷಕ ಬಿ.ರಾಜೇಶ್ ಉಪಸ್ಥಿತರಿದ್ದರು.
ಪುರುಷರ ವಿಭಾಗದಲ್ಲಿ 4 ತಂಡಗಳು (ಪರಪ್ಪ ಬ್ಲಾಕ್, ಕಾಸರಗೋಡು ಬ್ಲಾಕ್, ನೀಲೇಶ್ವರಂ ಪುರಸಭೆ, ನೀಲೇಶ್ವರಂ ಬ್ಲಾಕ್) ಹಾಗೂ ಮಹಿಳೆಯರ ವಿಭಾಗದಲ್ಲಿ 2 ತಂಡಗಳು (ನೀಲೇಶ್ವರಂ ನಗರಸಭೆ, ನೀಲೇಶ್ವರ ಬ್ಲಾಕ್) ಸ್ಪರ್ಧೆಯಲ್ಲಿದ್ದವು.
ಪುರುಷರ ವಿಭಾಗದಲ್ಲಿ ನೀಲೇಶ್ವರ ನಗರಸಭೆ ಹಾಗೂ ಮಹಿಳೆಯರ ವಿಭಾಗದಲ್ಲಿ ನೀಲೇಶ್ವರ ಬ್ಲಾಕ್ ಪಂಚಾಯತ್ ಚಾಂಪಿಯನ್ ಆದವು. ಪುರುಷ ವಿಭಾಗದಲ್ಲಿ ನೀಲೇಶ್ವರ ಬ್ಲಾಕ್ ಪಂಚಾಯತ್ ಮತ್ತು ಮಹಿಳಾ ವಿಭಾಗದಲ್ಲಿ ನೀಲೇಶ್ವರ ನಗರಸಭೆ ರನ್ನರ್ ಅಪ್ ಆದವು. ನೀಲೇಶ್ವರ ನಗರಸಭೆ ಉಪಾಧ್ಯಕ್ಷ ಟಿ.ಪಿ.ಮುಹಮ್ಮದ್ ರಫಿ ಬಹುಮಾನ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಶಜೀರ್, ಚಂದ್ರನ್ ಹಾಗೂ ಜಿಲ್ಲಾ ಬಾಸ್ಕೆಟ್ ಬಾಲ್ ಸಂಸ್ಥೆಯ ಕಾರ್ಯದರ್ಶಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಗೌಪ್ಯ ಸಹಾಯಕಿ ಎಂ.ಸೌಮಿನಿ ಸ್ವಾಗತಿಸಿ, ನೀಲೇಶ್ವರ ನಗರಸಭೆ ಸಂಯೋಜಕ ಅಖಿಲೇಶ್ ವಂದಿಸಿದರು.


