ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಇಂಟಗ್ರೇಟೆಡ್ ಟೀಚರ್ ಎಜುಕೇಶನ್ ಪೆÇ್ರೀಗ್ರಾಮ್ (ಐಟಿಇಪಿ) ವಿದ್ಯಾರ್ಥಿಗಳಿಗೆ ಇಂಡಕ್ಷನ್ ಪ್ರೋಗ್ರಾಮ್ ಅನ್ವಯ ಜಾಗೃತಿ ತರಗತಿಯನ್ನು ಆಯೋಜಿಸಲಾಯಿತು.
ವಿಶ್ವವಿದ್ಯಾನಿಲಯ ಭದ್ರತಾ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಹಾವಳಿ ಕುರಿತು ಅಬಕಾರಿ ಉಪ ಆಯುಕ್ತ ಜಯರಾಜ್ ಪಿ.ಕೆ ಹಾಗೂ ಸೈಬರ್ ಭದ್ರತೆ ಕುರಿತು ಬೇಕಲ ಉಪ ವಿಭಾಗದ ಸೈಬರ್ ಸೆಲ್ ಸಿವಿಲ್ ಪೆÇಲೀಸ್ ಅಧಿಕಾರಿ ಜ್ಯೋತಿಶ್ ಪಿ ತರಗತಿ ನಡೆಸಿದರು. ಮಾದಕ ವಸ್ತುಗಳ ಸೇವನೆಯು ವ್ಯಕ್ತಿ ಮತ್ತು ಸಮಾಜವನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು. ಈ ಸಂದರ್ಭ ಹೆಚ್ಚುತ್ತಿರುವ ಸೈಬರ್ ವಂಚನೆಗಳ ಹಿನ್ನೆಲೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳನ್ನು ಪ್ರಸ್ತುತಪಡಿಸಲಾಯಿತು. ವಿಶ್ವವಿದ್ಯಾನಿಲಯದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ವಿಶ್ವ ವಇದ್ಯಾಳಯದ ಭದ್ರತಾ ಅಧಿಕಾರಿ ವಿ. ಶ್ರೀಜಿತ್ ಮಾಹಿತಿ ನೀಡಿದರು. ಸಹಾಯಕ ಪ್ರಾಧ್ಯಾಪಕಕಿ ಅನುಶ್ರೀ ಚೌಧರಿ, ಡಾ.ಸಾಬಾ ಅನೀಸ್, ಡಾ. ಬಿಂದು ಟಿವಿ, ಭದ್ರತಾ ನಿರೀಕ್ಷಕ ಟಿ. ವಿನಯಕೃಷ್ಣನ್ ಉಪಸ್ಥಿತರಿದ್ದರು.

