ಸಮರಸ ಚಿತ್ರಸುದ್ದಿ: ಕಾಸರಗೋಡು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಕಾಸರಗೋಡು ನಗರದಲ್ಲಿ ಪ್ರತಿಭಟನೆ ನಡೆಸಿದರು. ಘಟಕ ಅಧ್ಯಕ್ಷ ಮೊಹಮ್ಮದ್ ಅಲಿ ಪತಾಹ್, ಮುನಾಬಿದ್, ಅಬ್ದುಲ್ ಜಲೀಲ್, ಸೆಬಾಸ್ಟಿಯನ್, ಬಾಲನ್ ತ್ರಿಕರಿಪುರ, ದೀಪಕ್ ಜಯರಾಂ, ಸಿ. ಎಂ. ಮುಸ್ತಫಾ ಮತ್ತು ವಿಜಯ ಕುಮಾರ್ ನಂಬಿಯಾರ್ ನೇತೃತ್ವ ವಹಿಸಿದ್ದರು.

