ಕಾಸರಗೋಡು: ಕೇಂದ್ರ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಅಧಿಕೃತ ಸ್ಥಾನವನ್ನು ಬಳಸಿಕೊಳ್ಳದಿರುವಂತೆ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅಧಿಕೃತ ಸ್ಥಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸುವುದು ಮಾದರಿ ನೀತಿ ಸಂಹಿತೆಯ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ. ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಜಾಹೀರಾತು, ರಾಜಕೀಯ ಸುದ್ದಿಗಳು, ತಮ್ಮ ಸಾಧನೆಗಳ ಪ್ರಚಾರ ಮತ್ತು ಪಕ್ಷದ ಭವಿಷ್ಯವನ್ನು ಸುಧಾರಿಸುವುದಕ್ಕಾಗಿ ಪಕ್ಷಪಾತ ಹೇಳಿಕೆಗಳು ಮತ್ತು ಚುನಾವಣಾ ಸಮಯದಲ್ಲಿ ಅಧಿಕೃತ ಮಾಧ್ಯಮಗಳನ್ನು ದುರುಪಯೋಗ ಪಡಿಸುವುದು ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುತ್ತದೆ.
ಕುಟುಂಬ ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು ಇತ್ಯಾದಿಗಳ ಬಗ್ಗೆ ಸಾಮಾನ್ಯ ಮಾಹಿತಿ ಅಥವಾ ಸಾಮಾನ್ಯ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶಕ್ಕಾಗಿ ಸರ್ಕಾರ ನಿರ್ಮಿಸಿದ ಹೋರ್ಡಿಂಗ್‍ಗಳು, ಜಾಹೀರಾತು ಇತ್ಯಾದಿಗಳ ಪ್ರದರ್ಶನಕ್ಕೆ ಅನುಮತಿ ಇರಲಿದೆ.
ಯಾವುದೇ ರಾಜಕೀಯ ಕಾರ್ಯಕರ್ತನ ಅಥವಾ ರಾಜಕೀಯ ಪಕ್ಷದ ಸಾಧನೆಗಳನ್ನು ಎತ್ತಿ ತೋರಿಸಲು ಪ್ರಯತ್ನಿಸುವ ಮತ್ತು ಅವರ ಫೆÇೀಟೋಗಳು, ಹೆಸರು ಅಥವಾ ಪಕ್ಷದ ಚಿಹ್ನೆ ಹೊಂದಿರುವ ಎಲ್ಲಾ ಹೋರ್ಡಿಂಗ್‍ಗಳು ಮತ್ತು ಜಾಹೀರಾತುಗಳನ್ನು ತೆರವುಗೊಳಿಸಬೇಕು ಅಥವಾ ಮರೆಮಾಡಬೇಕು. ಸಾರ್ವಜನಿಕ ವೆಚ್ಚದಲ್ಲಿ ನಿರ್ಮಿಸಿದ ಈ ಬಗೆಯ ಹೊಡಿರ್ಂಗ್ಸ್‍ಗಳು ಮತ್ತು ಜಾಹೀರಾತುಗಳನ್ನು ನಿರಂತರವಾಗಿ ಪ್ರದರ್ಶಿಸುವುದು, ಆ ರೀತಿಯಲ್ಲಿರುವ ಹೋಡಿರ್ಂಗ್ಸ್, ಜಾಹೀರಾತುಗಳು, ಪೆÇೀಸ್ಟರ್ ಗಳನ್ನು ಚುನಾವಣಾ ಪ್ರಚಾರ ದಿನಾಂಕಕ್ಕಿಂತ ಮೊದಲು ಸ್ಥಾಪಿಸಿರುವುದಾಗಿದ್ದರೂ ಮಾದರಿ ನಿಯಮ ಸಂಹಿತೆಯ ಪ್ರಕಾರ ಇದು ಕಾನೂನಿನ ಉಲ್ಲಂಘನೆಯಾಗಿರುತ್ತದೆ.
ಚುನಾವಣೆ ಸಂದರ್ಭ ಸಾರ್ವಜನಿಕ ಖಜಾನೆಯ ಹಣ ಖರ್ಚು ಮಾಡಿ ದಿನಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇರಿದಂತೆ ಇತರ ಮಾಧ್ಯಮಗಳಲ್ಲಿ ರಾಜಕೀಯ ಸುದ್ದಿ ಪ್ರಕಟಿಸುವವರ ವಿರುದ್ಧ ಹಾಗೂ ಚುನಾವಣಾ ಸಂದರ್ಭದಲ್ಲಿ ಸರಕಾರದ ಸಾಧನೆಗಳನ್ನು ಪ್ರಸ್ತಾಪಿಸಿ ಮಾಧ್ಯಮ ಹಾಗೂ ಜನರಲ್ಲಿ ತಪ್ಪು ತಿಳುವಕೆಯನ್ನು ನೀಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


