ಮಂಜೇಶ್ವರ: ಪುದುಚೇರಿಯಲ್ಲಿ ಜ. 20-25ರ ವರೆಗೆ ಜರಗುತ್ತಿರುವ ದಕ್ಷಿಣ ಭಾರತ ವಿಜ್ಞಾನ ಮೇಳ 2025ರಲ್ಲಿ ಹೈಸ್ಕೂಲ್ ವಿಭಾಗದ ವಿಜ್ಞಾನ ವರ್ಕಿಂಗ್ ಮೋಡೆಲ್ ಸ್ಪರ್ಧೆಯಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧೀಕರಿಸಿಕೊಂಡು ಮಂಜೇಶ್ವರ ಎಸ್. ಎ.ಟಿ. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಗಗನ್ ರಾಜ್ ಎಸ್.ಹಾಗೂ ನಿಶಾಂತ್ ಭಾಗವಹಿಸುತ್ತಿದ್ದಾರೆ.
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ತಾಂತ್ರಿಕ ಮ್ಯೂಸಿಯಂ(ವಿಐಟಿಎಂ) ಬೆಂಗಳೂರು, ಪುದುಚೇರಿ ಶಾಲಾ ಶಿಕ್ಷಣ ನಿರ್ದೇಶನಾಲಯ ಹಾಗೂ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳ ಶಿಕ್ಷಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಜರಗುತ್ತಿರುವ ದಕ್ಷಿಣ ಭಾರತ ವಿಜ್ಞಾನಮೇಳದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ಕೇರಳದಿಂದ ಒಟ್ಟು 47 ಮಂದಿ ಸ್ಪರ್ಧಾಳುಗಳು ಭಾಗವಹಿಸುತ್ತಿದ್ದಾರೆ.
ಆಲಪ್ಪುಳದಲ್ಲಿ ಇತ್ತೀಚೆಗೆ ಜರಗಿದ ರಾಜ್ಯ ಮಟ್ಟದ ವಿಜ್ಞಾನಮೇಳದಲ್ಲಿ ಪ್ರೌಢಶಾಲಾ ವಿಭಾಗದ ವಿಜ್ಞಾನ ವರ್ಕಿಂಗ್ ಮೋಡಲ್ ಸ್ಪರ್ಧೆಯಲ್ಲಿ ಮಂಜೇಶ್ವರ ಎಸ್. ಎ. ಟಿ. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಗಗನ್ ರಾಜ್ ಎಸ್. ಹಾಗೂ ನಿಶಾಂತ್ ಪ್ರದರ್ಶಿಸಿದ 'ಫ್ರಿ ಎನರ್ಜಿ ಅಟೋಮ್ಯಾಟಿಕ್ ಇನ್ ವರ್ಟರ್' ವರ್ಕಿಂಗ್ ಮೋಡಲ್ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿತ್ತು.
ಎಸ್.ಎ.ಟಿ ವಿದ್ಯಾಸಂಸ್ಥೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದಕ್ಷಿಣ ಭಾರತ ಮಟ್ಟದಲ್ಲಿ ವಿಜ್ಞಾನ ವಿಭಾಗದ ಪ್ರದರ್ಶನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅತ್ಯಪೂರ್ವ ಸಾಧನೆಯಾಗಿದೆ.
ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆಗೆ ಮತ್ತು ನಾಡಿಗೆ ಕೀರ್ತಿಯನ್ನು ತಂದಿರುವ ಗಗನ್ ರಾಜ್ ಕಣ್ವತೀರ್ಥ ಬೆಂಗರೆ ಶ್ರೀನಿವಾಸ- ಪವಿತ್ರ ದಂಪತಿಯ ಸುಪುತ್ರ ಹಾಗೂ ನಿಶಾಂತ್ ಕುಂಜತ್ತೂರು ಮಾಡ ಪ್ರದೀಶ್ ಕುಮಾರ್-ಲೀಲಾವತಿ ದಂಪತಿಯ ಸುಪುತ್ರ..

.jpg)
.jpg)
