ಬದಿಯಡ್ಕ: ನೀರ್ಚಾಲು ಗ್ರಾಮದ ಪಾಡ್ಲಡ್ಕ ಬಡಗಮೂಲೆಯ ಮಾಲತಿ ಎಂಬವರ ಪುತ್ರ ಚರಣ್ ರಾಜ್ ಜ. 20 ರಂದು ನೀರ್ಚಾಲಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮುಖ ಹಾಗೂ ತಲೆಗೆ ಗಂಭೀರ ಗಾಯಗಲಾಗಿದ್ದು ತುರ್ತು ಶಸ್ತ್ರ ಚಿಕಿತ್ಸೆಗೆ ಈಗಾಗಲೇ ವೈದ್ಯರು ತಿಳಿಸಿರುತ್ತಾರೆ. ಈ ಚಿಕಿತ್ಸೆಗೆ ಸುಮಾರು.4 ಲಕ್ಷ ರೂ.ಗಳಷ್ಟು ವೆಚ್ಚದ ಅಗತ್ಯವಿದ್ದು, ಈ ಮೊತ್ತವನ್ನು ಭರಿಸಲು ಕುಟುಂಬಕ್ಕೆ ಸಾಧ್ಯವಾಗದ ಕಾರಣ ದಾನಿಗಳ ಸಹಾಯ ನೆರವನ್ನು ಆಶಿಸಲಾಗಿದೆ. ಆದುದರಿಂದ ಚರಣ್ ರಾಜ್ ಗೆ ಆರ್ಥಿಕ ಸಹಾಯ ಮಾಡಬೇಕೆಂದು ವಿನಂತಿಸಲಾಗಿದೆ.
ಯಾರಿಗಾದರೂ ಅನಾಹುತವಾದಗ ಕೈಜೋಡಿಸಲು ಅದೆಷ್ಟೋ ದಾನಿಗಳು ನಮ್ಮ ಸಮಾಜದಲ್ಲಿದಾರೆ. ಅದೇ ರೀತಿ ಈ ಯುವಕನ ಬದುಕನ್ನು ಕಟ್ಟಲು ಸಾರ್ವಜನಿಕರು ಕೈಜೋಡಿಸಿ, ಚಿಕಿತ್ಸೆ ಫಲಕರಿಯಾಗಲಿ ಎಂಬ ವಿಶಾಲ ಮನೋಭಾವದಿಂದ ಆರ್ಥಿಕ ಸಹಾಯ ಈ ಯುವಕನ ಬಾಳಿಗೆ ಆಶಾಕಿರಣವಾಗಲಿದೆ.
ಆಸಕ್ತ ನೆರವೀಯುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ನೆರವೀಯಲು ವಿನಂತಿಸಲಾಗಿದೆ.
ಜಿ.ಪೇ ಸಂಖ್ಯೆ: 7907676395(ಅಶ್ವಿನಿ)
ಕರ್ನಾಟಕ ಬ್ಯಾಂಕ್
ನೀರ್ಚಾಲು ಶಾಖೆ.
ಖಾತೆ ಹೆಸರು: ಅಶ್ವಿನಿ
ಎ.ಸಿ.ನಂಬ್ರ: - 5322500101193901
ಐ.ಎಫ್.ಎಸ್.ಸಿ.: ಕೆ.ಎ.ಆರ್.ಬಿ. 0000532

.jpg)
-CHARAN%20RAJ.jpg)
