ಪೆರ್ಲ: ಕಾಟುಕುಕ್ಕೆಯಲ್ಲಿ ಯುವಕನನ್ನು ಕೊಲೆಗೈದು ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟುಹಾಕಲೆತ್ನಿಸಿದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಮಿಳ್ನಾಡಿನಿಂದ ಬದಿಯಡ್ಕ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಛತ್ತೀಸ್ ಗಡ್ ನಿವಾಸಿ ದೀಪಕ್ ಕುಮಾರ್ ಸಲಾಂ(32) ಬಂಧಿತ. ತಮಿಳುನಾಡು ಈರೋಡಿನಿಂದ ಈತನನ್ನು ಬಂಧಿಸಲಾಗಿದೆ. ಗದಗ ನಿವಾಸಿ ಶರಣದಾಸಪ್ಪ (28)ಕೊಲೆಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಗಿದೆ. 2017 ಡಿಸೆಂಬರ್ 30 ರಂದು ಕಾಟುಕುಕ್ಕೆಯ ಖಾಸಗಿ ವ್ಯಕ್ತಿಯ ಹಿತ್ತಲಿನಲ್ಲಿ ಅರ್ದ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯೆಂದು ಸಾಬೀತಾಗಿತ್ತು.
ಶರಣಪ್ಪನ ಜತೆಗಿದ್ದವರೇ ಕೊಲೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶ ನಿವಾಸಿ ಗಿರಿವಾರ್ ಸಿಂಗ್ (30) ಹಾಗೂ ಛತ್ತೀಸ್ ಗಡ್ ನಿವಾಸಿ ದೀಪಕ್ ಕುಮಾರ್ ಸಲಾಂ ಎಂಬಿವರನ್ನು ಬಂಧಿಸಲಾಗಿತ್ತು. ನಂತರ ದೀಪಕ್‍ಕುಮಾರ್ ಸಲಾಂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.



