ಬದಿಯಡ್ಕ: ಎದೆನೋವಿನ ಮಾತ್ರೆ ಖರೀದಿ ನೆಪದಲ್ಲಿ ನೀರ್ಚಾಲಿನ ಆಯುರ್ವೇದ ಮೆಡಿಕಲ್‍ಶಾಪ್‍ಗೆ ಆಗಮಿಸಿದ ತಂಡ ಮೆಡಿಕಲ್ ಶಾಪ್ ಮಾಲಕಿಯ ಕತ್ತಿನಲ್ಲಿದ್ದ ಮೂರುವರೆ ಪವನು ತೂಕದ ಕರಿಮಣಿ ಸರ ಎಳೆದು ಪರಾರಿಯಾಗಿದೆ.
ನೀರ್ಚಾಲು ಮೇಲಿನ ಪೇಟೆಯಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್ ಶಾಪ್ ಮಾಲಕಿ, ಜೇನುಮೂಲೆ ನಿವಾಸಿ ಸರೋಜಿನಿ ಎಸ್.ಎನ್(64) ಎಂಬವರು ಸರಕಳೆದುಕೊಮಡವರು. ಅಂಗಡಿಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ, ಅದರಲ್ಲಿದ್ದ ಓರ್ವ ಇಳಿದು ಬಂದು ಎದೆ ನೋವಿನ ಔಷಧ ಬೇಕೆಂದು ಕೇಳಿದ್ದು, ಇನ್ನೋರ್ವ ಬೈಕ್ ಸ್ಟಾರ್ಟ್‍ನಲ್ಲಿ ನಿಲ್ಲಿಸಿದ್ದನು. ಸರೋಜಿನಿ ಅವರು ಔಷದ ನೀಡುತ್ತಿದ್ದಂತೆ ಒಳಗೆ ಬಂದ ವ್ಯಕ್ತಿ, ಕತ್ತಿನಲ್ಲಿದ್ದ ಕರಿಮಣಿ ಎಳೆದು ಬ್ಯಕಿನಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ. ಸರೋಜಿನಿ ಅವರ ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದಾಗ ಕಳ್ಳರು ನಾಪತ್ತೆಯಾಗಿದ್ದರು. ಬದಿಯಡ್ಕ ಠಾಣೆ ಕೇಸು ದಾಖಲಿಸಿಕೊಂಡಿದ್ದಾರೆ.



