ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಇದರ ಆಶ್ರಯದಲ್ಲಿ ಎಂ.ಕೆ ಜಿನಚಂದ್ರನ್,ಕಮಲಮ್ಮ ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ ಕಾರ್ಯಕ್ರಮ ಮಾ.1ರಂದು ಅಪರಾಹ್ನ 2.30 ಕ್ಕೆ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ನಡೆಯುವುದು.
ಕ.ಸಾ.ಪ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. 'ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ' ಎನ್ನುವ ವಿಷಯದ ಕುರಿತು ಸಾಹಿತಿ ಆಯಿಶಾ ಪೆರ್ಲ ಮತ್ತು 'ಕನ್ನಡ ಕಥಾ ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ' ಎನ್ನುವ ವಿಷಯದ ಕುರಿತು ಪ್ರಾಧ್ಯಾಪಕ,ಲೇಖಕ ಡಾ. ಸುಭಾಷ್ ಪಟ್ಟಾಜೆ ಉಪನ್ಯಾಸ ನೀಡುವರು. ಕನ್ನಡ ಹೋರಾಟಗಾರ್ತಿ ನಯನಾ ಗಿರೀಶ್ ಅಡೂರು, ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾ ಯಾರು, ಪ್ರದೀಪ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಸಂವಾದ ಕಾರ್ಯಕ್ರಮವು ನಡೆಯುವುದು. ವೆಂಕಟ್ ಭಟ್ ಎಡನೀರು, ಎಸ್. ಎನ್ ಭಟ್ ಸೈಪಂಗಲ್ಲು ,ಜೋತ್ಸ್ನಾ ಕಡಂದೇಲು ,ನರಸಿಂಹ ಭಟ್ ಏತಡ್ಕ, ರಾಜಾರಾಮ ವರ್ಮ.ವಿ, ಸುಭಾಷ್ ಪೆರ್ಲ, ವನಜಾಕ್ಷಿ ಚೆಂಬ್ರಕಾನ, ಧನ್ಯಶ್ರೀ ಸರಳಿ, ಹಿತೇಶ್ ನೀರ್ಚಾಲು, ನವ್ಯಶ್ರೀ ಸ್ವರ್ಗ, ಮಂಜಶ್ರೀ ನಲ್ಕ, ರಂಜಿತಾ ಪಟ್ಟಾಜೆ, ದಿವ್ಯಾಗಟ್ಟಿ ಪರಕ್ಕಿಲ, ನ್ಯಾಯವಾದಿ ಥೋಮಸ್ ಡಿ ಸೋಜಾ ,ಸಾಹಿತಿ ಸುಂದರ ಬಾರಡ್ಕ ಭಾಗವಹಿಸುವರು.



