ಕಾಸರಗೋಡು: ಕೇಂದ್ರೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ಚಾಲಿಂಗಾಲ್ ಮೊಟ್ಟ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡಿದ್ದ ತಾಸುಗಳೊಳಗೆ ಈ ಪ್ರದೇಶದಲ್ಲಿ ಸಾಕುನಾಯಿಯನ್ನು ಕಚ್ಚಿಕೊಂದುಹಾಕಿದ ಸ್ಥಿತಿಯಲ್ಲಿ ಪತ್ತೆಯಾಘಿದ್ದು, ಇದರಿಂದ ಜನತೆ ಮತ್ತಷ್ಟು ಭೀತಿಗೊಳಗಾಗಿದ್ದಾರೆ.
ಪುಲ್ಲೂರ್-ಎರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಾಡತ್ ಪಾರ ಎಂಬಲ್ಲಿ ಸಾಕುನಾಯಿಯನ್ನು ಚಿರತೆ ಕೊಂದುಹಾಕಿದೆ. ಸನಿಹ ಚಿರತೆಯ ಪಂಜದ ಗುರುತು ಪತ್ತೆಯಾಗಿದ್ದು, ಚಿರತೆ ಸಂಚಾರ ಖಚಿತಗೊಂಡಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದ್ದರೆ. ಗ್ರಾಪಂ ಅಧ್ಯಕ್ಷ ಸಿ.ಕೆ ಅರವಿಂದಾಕ್ಷನ್ ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ಮೊಟ್ಟ ಪ್ರದೇಶದಲ್ಲಿ ವಾಹನದಲ್ಲಿ ತೆರಳುತ್ತಿದ್ದವರಿಗೆ ಮಂಗಲವಾರ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ವಾಹನದಲ್ಲಿದ್ದವರು ಪೊಲೀಸರಿಗೂ ಮಾಹಿತಿ ನೀಡಿದ್ದರು.
ರಸ್ತೆಗೆ ಅಡ್ಡ ಓಡಿದ ಚಿರತೆ ನಂತರ ಕೇಂದ್ರೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯ ತೋಟಗರಿಕಾ ನಿಗಮದ ಗೇರುತೋಟದೊಳಗೆ ಸಂಚರಿಸಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದರು. ಕೆಲವು ದಿವಸಗಳ ಹಿಂದೆ ಅಂಬಲತ್ತರ ಸಮೀಪ ತಟ್ಟುಮ್ಮಲ್ ಹಗೂ ಮೀಙÉೂೀತ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

